
ಸುರತ್ಕಲ್: ಪ್ರಾಥಮಿಕ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ಅತ್ಯಂತ ನಿರ್ಣಾಯಕವಾದ ಘಟ್ಟವಾಗಿದೆ ಎಂದು ಎಂ,ಎಸ್,ಇ,ಝೆಡ್ ಕಂಪೆನಿ ಸೆಕ್ರಟರಿ ಫಣಿಭೂಷಣ್ ನುಡಿದರು. ಅವರು ಮಧ್ಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಗೆ ಎಂ,ಎಸ್,ಇ,ಝೆಡ್ ವತಿಯಿಂದ ಸುಮಾರು 2 ಲಕ್ಷ ವೆಚ್ಚದಲ್ಲಿ ಇನ್ ವರ್ಟರ್ ವ್ಯವಸ್ಥೆ ಮಾಡಿದ್ದು ಅದನ್ನು ಶಾಲೆಗೆ ಹಸ್ತಾಂತರ ಮಾಡಿ ಮಾತನಾಡಿದರು. ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ ಉತ್ತಮ ಸಂಸ್ಕಾರ ಮತ್ತು ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರಲ್ಲದೆ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿ ಈ ಮಟ್ಟದಲ್ಲಿ ಬೆಳೆದಿರುವುದು ಶ್ಲಾಘನೀಯ ಮುಂದಿನ ಶಾಲೆಯ ಬೆಳವಣಿಗೆಗೆ ನಮ್ಮ ಸಂಸ್ಥೆಯ ಸದಾ ಸಹಕಾರವಿದೆ ಎಂದರು.
ವೇದಿಕೆಯಲ್ಲಿ ಎಂ,ಎಸ್,ಇ,ಝೆಡ್ ನ ಪ್ರಭಂದಕ ಜಯಪ್ರಕಾಶ್ ಸೂರಿಂಜೆ,ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಕೋಶಾಧಿಕಾರಿ ವಿಠಲ ಶೆಟ್ಟಿ, ಸದಸ್ಯರಾದ ವಜ್ರಾಕ್ಷಿ ಶೆಟ್ಟಿ ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಶಶಿಕಲಾ ,ಸದಸ್ಯರಾದ ಸವಿತಾ ಕುಲಾಲ್,ಪರಮೇಶ್ವರ ,ಶಿಕ್ಷಕಿ ಲಾವಣ್ಯ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅನಿಲ್ ಸಾಲ್ಯಾನ್ ವಹಿಸಿದರು. ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪುಷ್ಷರಾಜ್ ಶೆಟ್ಟಿ ಸ್ವಾಗತಿಸಿ ಸ್ವಾಗತಿಸಿ, ಶಾಲಾ ಮುಖ್ಯ ಶಿಕ್ಷಕಿ ಜೇನ್ ಡಿಸೋಜಾ ಧನ್ಯವಾದ ಸಮರ್ಪಿಸಿದರು.
