
ಮಂಗಳೂರು: ಭಾರತೀಯ ಹೋಟೆಲ್ ಉದ್ಯಮವನ್ನು ಪ್ರತಿನಿಧಿಸುವ ಸರ್ವೋಚ್ಛ ಸಂಸ್ಥೆ NRAI ನ ಮಂಗಳೂರು ಮತ್ತು ಪಶ್ಚಿಮ ಕರ್ನಾಟಕದ ಹೊಸ ಅಧ್ಯಾಯ ಮಂಗಳೂರಿನಲ್ಲಿ ಇತ್ತೀಚಿಗೆ ಪ್ರಾರಂಭವಾಯಿತು. ಹೋಟೆಲ್ ಅವತಾರ್ ನಲ್ಲಿ ಜೂನ್ 4 ರಂದು ಅಧಿಕೃತವಾಗಿ ಪ್ರಾರಂಭಗೊಂಡ ಈ ಸಂಸ್ಥೆ ಕರಾವಳಿ ಕರ್ನಾಟಕದ ಆಹಾರ ಸಂಸ್ಕೃತಿಯನ್ನು ಬಲಪಡಿಸುವಲ್ಲಿ ಮತ್ತು ಆತಿಥ್ಯ ಕ್ಷೇತ್ರವನ್ನು ಉತ್ತೇಜಿಸುವಲ್ಲಿ ಮತ್ತು ಕರಾವಳಿ ಕರ್ನಾಟಕವನ್ನು ಒಂದು ಆಹಾರ ಮತ್ತು ಪ್ರವಾಸೋದ್ಯಮ ತಾಣ ವನ್ನಾಗಿ ಸ್ಥಾಪಿಸುವಲ್ಲಿ ಒಂದು ಪ್ರಮುಖ ಮೈಲು ಗಲ್ಲಾಗಿದೆ ಎಂದು ಜನರಲ್ ಮೆನೇಜರ್ ನೇಹಾ ಗ್ರೋವರ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಕರ್ನಾಟಕದ ಆಹಾರ ಮತ್ತು ಆತಿಥ್ಯ ಕ್ಷೇತ್ರ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಈ ಭಾಗದ ಜನರ ಪ್ರವಾಸೋದ್ಯಮ ದ ಕಡೆ ಒಲವು ಮತ್ತು ಆದ್ಯತೆ. ಹೆಚ್ಚುತ್ತಿರುವ ಆದಾಯ ಇದಕ್ಕೆ ಕಾರಣೀಭೂತವಾಗಿವೆ. ಮಂಗಳೂರು ಮತ್ತು ಪಶ್ಚಿಮ ಕರ್ನಾಟಕ ಪ್ರದೇಶವು ಇತ್ತೀಚಿಗೆ ಒಂದು ಪ್ರಾಮುಖ್ಯ ಆತಿಥ್ಯ ಕ್ಷೇತ್ರವಾಗಿ ಹೊರಹೊಮ್ಮತಿದೆ. ಹೆಚ್ಚುತ್ತಿರುವ ಉಪಹಾರ ಗೃಹಗಳು, ಕೆಫೆ. ಬಾರ್ ಮತ್ತು ಕ್ಲೌಡ್ ಕಿಚನ್ ಗಳು ಹಾಗೂ ಪ್ರವಾಸೋದ್ಯಮಕ್ಕೆ ಪೂರಕವಾದ ವ್ಯಾಪಾರೋಧ್ಯಮಗಳು ಇದನ್ನು ದೃಡೀಕರಿಸುತ್ತವೆ.
ಇತ್ತೀಚಿಗಿನ ಅಂಕಿ ಅಂಶಗಳ ಪ್ರಕಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಸುಮಾರು 11 ಕೋಟಿಗಳಿಗೂ ಅಧಿಕ ದೇಶಿಯ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇದು ಕರ್ನಾಟಕದ ಒಟ್ಟು ದೇಶಿಯ ಪ್ರವಾಸಿಗರ ಸಂಖ್ಯೆಯ 10 ರಿಂದ 15 ಶೇಕಡಾ ಎಂಬುದು ಉಲ್ಲೇಖನೀಯವಾಗಿದೆ.

NRAI ನ ಮಂಗಳೂರು ಮತ್ತು ಪಶ್ಚಿಮ ಕರ್ನಾಟಕದ ಪ್ರಮುಖರಾದ ಪ್ರಶಾಂತ್ ರಾವ್ ಅರೂರ್ ಮಾತಾಡಿ, “ಮಂಗಳೂರು ವಿಭಾಗವು ದೇಶದ ಆತಿಥ್ಯ ಕ್ಷೇತ್ರದಲ್ಲಿ ಒಂದು ಆಶಾದಾಯಕ ಮಾರುಕಟ್ಟೆಯಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು. NRAI ನ ಮಂಗಳೂರು ವಿಭಾಗ ಪ್ರಾರಂಭದೊಂದಿಗೆ ಈ ಭಾಗದ ಆತಿಥ್ಯ ಕ್ಷೇತ್ರದ ಉದ್ಯಮಗಳನ್ನು ಒಂದು ಕೇಂದ್ರೀಕೃತ ಸಂಸ್ಥೆಯ ಕೆಳಗೆ ತರುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು. ಅಲ್ಲದೆ ಉದ್ಯಮಗಳ ಮಧ್ಯೆ ಸಹಕಾರ ಬಲ ವರ್ಧನೆ, ಉದ್ಯಮಿಗಳಿಗೆ ಪ್ರೋತ್ಸಾಹ, ಉದ್ಯಮಗಳಿಗೆ ಸಂಬಂಧಪಟ್ಟ ಸವಾಲುಗಳನ್ನು ಎದುರಿಸುವುದು ಮತ್ತು ಈ ಭಾಗದ ವಿಶಿಷ್ಟವಾದ ಆಹಾರ ಸಂಸ್ಕೃತಿಯನ್ನು ಪ್ರೋತ್ಸಾಹಿಸಿ ರಾಷ್ಟ್ರ ಮಟ್ಟದಲ್ಲಿ ಮುನ್ನೆಲೆಗೆ ತರುವಲ್ಲಿ ಈ ಸಂಸ್ಥೆಯು ಸಹಕಾರಿ ಆಗಲಿದೆ ಎಂದು ತಿಳಿಸಿದರು.
ಸಂಸ್ಥೆಯ ಪೂರ್ವ ಅಧ್ಯಕ್ಷ ಮತ್ತು ಇಂಡಿಗೋ ಹಾಸ್ಪಿಟಲಿಟಿ ಸಂಸ್ಥೆಯ ನಿರ್ದೇಶಕ ಅನುರಾಗ್ ಕತ್ರಿಯರ್ ಮಾತಾಡಿ, “ದೇಶೀಯ ಪ್ರವಾಸೋದ್ಯಮ ದೇಶದ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಿದ್ದು ಮತ್ತು ಪ್ರಾದೇಶಿಕ ಆಹಾರ ಮಾರುಕಟ್ಟೆ ದೇಶದ ಹೋಟೆಲ್ ಉದ್ಯಮದ ಶೀಘ್ರ ಬೆಳವಣಿಗೆಗೆ ಕಾರಣ ವಾಗಿದೆ ಎಂದು ಹೇಳಿದರು. NRAI ನ ಮಂಗಳೂರು ಘಟಕ ಪ್ರಾರಂಭ ಒಂದು ಪ್ರಾಮುಖ್ಯ ಮೈಲುಗಲ್ಲು ಎಂದರು. ಈ ಪ್ರದೇಶದ ವಿಶಿಷ್ಟ ಆಹಾರ ಸಂಸ್ಕೃತಿ, ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಮತ್ತು ಇಲ್ಲಿನ ಜನರ ಉದ್ಯಮಶೀಲತೆ ಒಂದಕ್ಕೊಂದು ಪೂರಕವಾಗಿವೆ ಎಂದು ಹೇಳಿದರು. ಈ ಸಂಸ್ಥೆಯ ಪ್ರಾರಂಭದೊಂದಿಗೆ ಈ ಭಾಗದ ಆಹಾರ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆಗಳು ಪ್ರಾದೇಶಿಕ ಗಡಿಯನ್ನು ದಾಟಿ ನಡೆಯಲಿವೆ ಎಂದವರು ಹೇಳಿದರು.
NRAI ನ ಉಪಾಧ್ಯಕ್ಷ ಪ್ರಣವ್ ರುಂಗ್ತಾ ಮಾತನಾಡುತ್ತ ಕರ್ನಾಟಕವು ದೇಶದ ಪ್ರಗತಿಪರ ಆತಿಥ್ಯ ಉದ್ಯಮದಲ್ಲಿ ಮಂಚೂಣಿಯಲ್ಲಿದ್ದು, ಮಂಗಳೂರಿನ ಆಹಾರ ವಿಶಿಷ್ಟ ವಾಗಿದೆ ಎಂದರು. ಈ ಭಾಗದ ಮೀನಿನ ಖಾದ್ಯಗಳು ಮತ್ತು ವೇಗವಾಗಿ ವಿಕಸನ ಗೊಳ್ಳುತ್ತಿರುವ ಡೈನಿಂಗ್ ಇಕೋ ಸಿಸ್ಟಮ್ ಅಭಿವೃದ್ಧಿಗೆ ವಿಫುಲ ಅವಕಾಶಗಳನ್ನು ತೆರೆದಿಟ್ಟಿವೆ ಎಂದರು. NRAI ಈ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ತಿಳಿಸಿದರು.
NRAI ಹಿನ್ನೆಲೆ:
1982ರಲ್ಲಿ ಪ್ರಾರಂಭವಾದ ಸಂಸ್ಥೆ ದೇಶದ ಉದ್ದಗಲ ಕ್ಕೂ ಸುಮಾರು 5:69 ಲಕ್ಷ ಕೋಟಿ ವ್ಯವಹಾರ ಮಾಡುವ ಸುಮಾರು 5 ಲಕ್ಷ ಹೋಟೆಲ್ ಗಳನ್ನು ಪ್ರತಿನಿಧಿಸುತ್ತಿದ್ದು, ಭಾರತದ ಆಹಾರ ಉದ್ಯಮ ಕ್ಷೇತ್ರದ ಏಕೈಕ ಪ್ರತಿನಿಧಿ ಆಗಿರುತ್ತದೆ. ಈ ಸಂಸ್ಥೆ ಭಾರತದ ಆಹಾರ ಸೇವಾ ವಿಭಾಗವನ್ನು ಪ್ರೋತ್ಸಹಿಸುವ ಮತ್ತು ಬಲ ವರ್ಧನೆ ಮಾಡುವ ಗುರಿ ಇಟ್ಟು ಕೊಂಡಿರುತ್ತದೆ.
ಪತ್ರಿಕಾಗೋಷ್ಟಿಯಲ್ಲಿ ಸಂಘಟನೆ ಕಾರ್ಯದರ್ಶಿ ಡೆನ್ ಡಿಸೋಜ, ಅಶ್ವಿನ್ ರೈ, ಸುಧಾಕರ್ ಪೂಂಜಾ, ಶಿವಪ್ರಸಾದ್ ಶೆಟ್ಟಿ, ವರದ್ ರಾಜ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.