ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂಭ್ರಮದ ನಡುವೆಯೇ ಕಾಂಗ್ರೆಸ್ ಪಡಸಾಲೆಯಲ್ಲಿ ಭಿನ್ನಮತದ ಬೇಗುದಿ ತಾರಕಕ್ಕೇರಿದೆ. ಮೊದಲ ಪಟ್ಟಿಯಲ್ಲಿ ಸಚಿವ ಸ್ಥಾನ ಸಿಗಬಹುದು ಎಂದು ದೃಢವಾಗಿ ನಂಬಿದ್ದ ಪಕ್ಷದ ಹಲವು ಘಟಾನುಘಟಿ ನಾಯಕರಿಗೆ ಕೊನೆಯ ಕ್ಷಣದಲ್ಲಿ ಹೈಕಮಾಂಡ್ ಶಾಕ್ ನೀಡಿದೆ. ಇದು ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

ಮೊದಲ ಲಿಸ್ಟ್‌ನಿಂದ ಹೊರಗುಳಿದ ಹೆಮ್ಮರಗಳು!
ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿರುವ ಮೊದಲ ಸಚಿವರ ಪಟ್ಟಿಯಲ್ಲಿ ಪಕ್ಷದ ಪ್ರಭಾವಿ ನಾಯಕರ ಹೆಸರುಗಳೇ ಮಾಯವಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರಮುಖವಾಗಿ:
ಜಮೀರ್ ಅಹಮದ್ ಖಾನ್
ಎಚ್.ಕೆ. ಪಾಟೀಲ್
ಶಿವರಾಜ ತಂಗಡಗಿ
ಸಂತೋಷ್ ಲಾಡ್
ಚಲುವರಾಯಸ್ವಾಮಿ
ದಿನೇಶ್ ಗುಂಡೂರಾವ್
ಎಚ್.ಸಿ. ಮಹದೇವಪ್ಪ
ಎಂ.ಸಿ. ಸುಧಾಕರ್
ಲಕ್ಷ್ಮಿ ಹೆಬ್ಬಾಳ್ಕರ್
ಎನ್.ಎಸ್. ಭೋಸರಾಜು
ಶಿವಾನಂದ ಪಾಟೀಲ್
ಆರ್.ಬಿಸಿ. ತಿಮ್ಮಾಪುರ್
ಶರಣಬಸಪ್ಪ ದರ್ಶನಾಪುರ್
ಮಧು ಬಂಗಾರಪ್ಪ
ಈ ಹಿರಿಯ ಹಾಗೂ ಪ್ರಾದೇಶಿಕವಾಗಿ ಪ್ರಭಾವಿ ಎನಿಸಿಕೊಂಡಿರುವ ನಾಯಕರನ್ನು ಮೊದಲ ಹಂತದಲ್ಲಿ ಕೈಬಿಟ್ಟಿರುವುದು ಹೊಸ ಊಹಾಪೋಹಗಳಿಗೆ ಕಾರಣವಾಗಿದೆ. ಇವರ ಜೊತೆಗೆ ಪಕ್ಷದಲ್ಲಿದ್ದ ಹಲವು ಭರವಸೆಯ ಯುವ ಶಾಸಕರಿಗೂ ಈ ಬಾರಿ ಸಚಿವ ಸ್ಥಾನದ ಅದೃಷ್ಟ ಖುಲಾಯಿಸಿಲ್ಲ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ


ಹುಸಿಯಾದ ಲಕ್ಷ್ಮಣ ಸವದಿ ನಿರೀಕ್ಷೆ
ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದು ಶಕ್ತಿ ತುಂಬಿದ್ದ ಹಿರಿಯ ನಾಯಕ ಲಕ್ಷ್ಮಣ ಸವದಿ ಅವರಿಗೆ ಮೊದಲ ಪಟ್ಟಿಯಲ್ಲೇ ಸ್ಥಾನ ಸಿಗಲಿದೆ ಎಂಬ ಬಲವಾದ ಊಹಾಪೋಹಗಳು ಹರಿದಾಡಿದ್ದವು. ಆದರೆ, ಸವದಿ ಅವರಿಗೂ ಮೊದಲ ಸುತ್ತಿನಲ್ಲಿ ನಿರಾಶೆಯಾಗಿದೆ. ಸದ್ಯಕ್ಕೆ ಹೈಕಮಾಂಡ್ ಬಿಡುಗಡೆ ಮಾಡಲಿರುವ ಮುಂದಿನ ಅಥವಾ ‘ಮತ್ತೊಂದು ಪಟ್ಟಿ’ಯಲ್ಲಿ ತಮಗೆ ಸ್ಥಾನ ಸಿಗಬಹುದು ಎಂಬ ಕೊನೆಯ ಆಸೆ ಈ ನಾಯಕರಲ್ಲಿ ಜೀವಂತವಾಗಿದೆ. ಆದರೆ, ಮೂಲ ಕಾಂಗ್ರೆಸಿಗರು ಮತ್ತು ವಲಸಿಗರ ನಡುವಿನ ಜಿದ್ದಾಜಿದ್ದಿನಿಂದಾಗಿ ಅಂತಿಮ ಕ್ಷಣದಲ್ಲಿ ತಮ್ಮ ಹೆಸರು ಕೈತಪ್ಪಿ ಹೋಗಬಹುದೇ ಎಂಬ ಆತಂಕ ಹಾಗೂ ತೀವ್ರ ಭಯ ಹಲವು ಆಕಾಂಕ್ಷಿಗಳನ್ನು ಕಾಡಲಾರಂಭಿಸಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅಸಮಾಧಾನದ ಹೊಗೆ ಆಡುತ್ತಿದ್ದು, ಹೈಕಮಾಂಡ್ ಮುಂದಿನ 24 ಗಂಟೆಗಳಲ್ಲಿ ಇವರನ್ನು ಹೇಗೆ ಸಮಾಧಾನಪಡಿಸಲಿದೆ ಮತ್ತು ಎರಡನೇ ಪಟ್ಟಿಯಲ್ಲಿ ಯಾರಿಗೆಲ್ಲಾ ಮಣೆ ಹಾಕಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.