ಮಾದಕ ವಸ್ತು ಸೇವನೆ ಪ್ರಕರಣ; ಆರು ಮಂದಿ ವಶಕ್ಕೆ

ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೆಟ್ ನ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಶಕ್ತಿನಗರದ ಕಲಾಂಗಣ್ ಹಾಲ್ ಬಳಿ ಕಾರ್ಕಳ ಬೈಲೂರು ನಿವಾಸಿ ವಿಗ್ರೇಡ್ ಡಿ’ಸೋಜಾ (37) ಎಂಬಾತನನ್ನು, ಕೊಣಾಜೆ ಠಾಣೆ ಪೊಲೀಸರು ಹರೇಕಳ ಗ್ರಾಮದ ಬೈತಾರುವಿನ ನದಿಯ ಬಳಿ ಮಾದಕ ವಸ್ತು ಸೇವನೆ ನಶೆಯಲ್ಲಿದ್ದ ಹರೇಕಳ ದೇರಡ್ಕದ ಫಯಾಜ್ (34) ಎಂಬಾತನನ್ನು ಬಂಧಿಸಿದ್ದಾರೆ.

ಪಾಂಡೇಶ್ವರ ಠಾಣೆ ಪೊಲೀಸರು ಮಾರ್ಗನ್ಸಗೇಟ್ ಬಳಿ ಕಾಸರಗೋಡು ಜಿಲ್ಲೆಯ ಅರ್ಫಖ್ ಅಬ್ದುಲ್ಲಾ (34) ಮತ್ತು ಮೆಹರೂಫ್ (30) ಎಂಬುವವರನ್ನು, ಬಜಪೆ ಠಾಣೆ ಪೊಲೀಸರು ಕೈಕಂಬ ಜಂಕ್ಷನ್ ಬಳಿ ಅಲನ್ ಡೇವಿಡ್ ಸಿಕ್ಕೇರ (21) ಮತ್ತು ಕಲಂದರ್ (34) ಎಂಬುವವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!