ಮೊಬೈಲ್ ನೋಡಬೇಡ ಎಂದಿದಕ್ಕೆ ಬಾಲಕ ನಾಪತ್ತೆ!

ಸುಳ್ಯ: ಮೊಬೈಲ್ ನೋಡುತ್ತಿದ್ದ ವಿಚಾರಕ್ಕೆ ತಾಯಿ ಬೈದು ಬುದ್ಧಿಮಾತು ಹೇಳಿದ್ದಕ್ಕೆ ಬೇಸತ್ತು 16 ವರ್ಷದ ಅಪ್ರಾಪ್ತ ಬಾಲಕನೊಬ್ಬ ಮನೆಯಿಂದ ಹೊರಹೋಗಿ ನಾಪತ್ತೆಯಾಗಿರುವ ಘಟನೆ ಸುಳ್ಯ ಕಸಬಾ ಗ್ರಾಮದ ಬೋರುಗುಡ್ಡೆ ಎಂಬಲ್ಲಿ ನಡೆದಿದೆ.

ನಾಪತ್ತೆಯಾದ ಬಾಲಕನನ್ನು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸಿ ಸಲ್ಮಾ (40) ಎಂಬವರ ಮಗ ಸೈಯದ್ ಆಲಿ ಸೈಯದ್ ಗೌಸ (16) ಎಂದು ಗುರುತಿಸಲಾಗಿದೆ. ಪ್ರಸ್ತುತ ಸಲ್ಮಾ ಅವರು ಬೋರುಗುಡ್ಡೆ ಎಂಬಲ್ಲಿ ಪತಿ ಹಾಗೂ ಮಗನೊಂದಿಗೆ ವಾಸವಾಗಿದ್ದಾರೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಘಟನೆಯ ಹಿನ್ನೆಲೆ: ಮೇ 30 ರಂದು ಬೆಳಿಗ್ಗೆ ಸೈಯದ್ ಆಲಿ ಸೈಯದ್ ಗೌಸ ಮೊಬೈಲ್ ನೋಡುತ್ತಿದ್ದಾಗ, ತಾಯಿ ಸಲ್ಮಾ ಅವರು ಮೊಬೈಲ್ ನೋಡದಂತೆ ಬೈದು ಬುದ್ಧಿಮಾತು ಹೇಳಿದ್ದರು. ಇದರಿಂದ ಬೇಸರಗೊಂಡ ಬಾಲಕ, ಸ್ವಲ್ಪ ಹೊತ್ತಿನ ಬಳಿಕ ಯಾರಿಗೂ ಹೇಳದೆ ಮನೆಯಿಂದ ಹೊರಹೋಗಿದ್ದಾನೆ. ಆದರೆ ದೀರ್ಘ ಸಮಯದ ಹೊರತಾಗಿಯೂ ಆತ ಮರಳಿ ಮನೆಗೆ ಹಿಂತಿರುಗಿಲ್ಲ.

ಮಗ ಮನೆಗೆ ಬಾರದೇ ಇದ್ದಾಗ ಆತಂಕಗೊಂಡ ಪೋಷಕರು ಆತನ ಗೆಳೆಯರು, ಸಂಬಂಧಿಕರ ಮನೆ ಸೇರಿದಂತೆ ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಬಾಲಕನ ಯಾವುದೇ ಸುಳಿವು ಪತ್ತೆಯಾಗಿಲ್ಲ.

ಈ ಕುರಿತು ತಾಯಿ ಸಲ್ಮಾ ಅವರು ನೀಡಿದ ಅಧಿಕೃತ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 73/2026, ಕಲಂ: 137 (2) ಬಿಎನ್‌ಎಸ್ (BNS) 2023 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!