ಆರ್‌ಸಿಬಿ ಬ್ಯಾಟರ್ ಟಿಮ್ ಡೇವಿಡ್ ವಿರುದ್ಧ ಬಿಸಿಸಿಐ ಕ್ರಮ: ಒಂದು ಪಂದ್ಯ ನಿಷೇಧ

ಅಹ್ಮದಾಬಾದ್‌: ಫೈನಲ್‌ ಪಂದ್ಯಾಟದ ವೇಳೆ ಅಂಪೈರ್‌ ನಿತಿನ್‌ ಮೆನನ್‌ ಗುರಿಯಾಗಿಸಿ ಐಸ್‌ಬ್ಯಾಗ್‌ ಎಸೆದ ಕಾರಣ ಆರ್‌ಸಿಬಿಯ ಬ್ಯಾಟರ್‌ ಡೇವಿಡ್‌ ಅವರಿಗೆ 1 ಪಂದ್ಯ ನಿಷೇಧ ಹೇರಲಾಗಿದ್ದು, ಅವರು ಮುಂದಿನ ಆವೃತ್ತಿಯ ಆರಂಭಿಕ ಪಂದ್ಯವನ್ನು ಆಡುವಂತಿಲ್ಲ.

ವಾಸ್ತವವಾಗಿ ಟಿಮ್ ಡೇವಿಡ್, ಗುಜರಾತ್ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ, ಇನ್ನಿಂಗ್ಸ್​ನ 10 ನೇ ಓವರ್‌ನಲ್ಲಿ ಆನ್-ಫೀಲ್ಡ್ ಅಂಪೈರ್ ನಿತಿನ್ ಮೆನನ್ ಮೇಲೆ ಐಸ್ ಪ್ಯಾಕ್ ಎಸೆದರು. ಇದು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.9 ರ ಉಲ್ಲಂಘನೆಯಾಗಿದೆ. ಪಂದ್ಯದ ಸಮಯದಲ್ಲಿ ಆಟಗಾರ, ತಂಡದ ಅಧಿಕಾರಿ, ಅಂಪೈರ್, ಪಂದ್ಯದ ರೆಫರಿ ಅಥವಾ ಯಾವುದೇ ಇತರ ವ್ಯಕ್ತಿಯ ಕಡೆಗೆ ಆಕ್ರಮಣಕಾರಿ ಅಥವಾ ಅಪಾಯಕಾರಿ ರೀತಿಯಲ್ಲಿ ಚೆಂಡು ಅಥವಾ ಕ್ರಿಕೆಟ್ ಸಾಮಗ್ರಿಯನ್ನು (ನೀರಿನ ಬಾಟಲ್, ಇತ್ಯಾದಿ) ಎಸೆಯುವುದು ಈ ನಿಯಮದ ಉಲ್ಲಂಘನೆಯಾಗಲಿದೆ. ಹೀಗಾಗಿ ಬಿಸಿಸಿಐ, ಟಿಮ್ ಡೇವಿಡ್ ಅವರ ಪಂದ್ಯ ಶುಲ್ಕದ 50 ಪ್ರತಿಶತ ಮೊತ್ತ ದಂಡ ವಿಧಿಸಿದ್ದು, ಎರಡು ಡಿಮೆರಿಟ್ ಅಂಕಗಳನ್ನು ನೀಡಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಈ ಆವೃತ್ತಿಯಲ್ಲಿ ಟಿಮ್ ಡೇವಿಡ್ ಬಿಸಿಸಿಐನಿಂದ ದಂಡನೆಗೆ ಗುರಿಯಾಗುತ್ತಿರುವುದು ಇದು ಮೂರನೇ ಬಾರಿಗೆ. ಇದಕ್ಕೂ ಮೊದಲು, ಲೀಗ್ ಹಂತದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಿಯಮ ಉಲ್ಲಂಘಿಸಿದ್ದ ಡೇವಿಡ್​ಗೆ ಒಂದು ಡಿಮೆರಿಟ್ ಪಾಯಿಂಟ್ ಅಂಕ ನೀಡಿತ್ತು. ಇದಾದ ಬಳಿಕ ಅದೇ ಮುಂಬೈ ವಿರುದ್ಧ ನಡೆದಿದ್ದ 54 ನೇ ಪಂದ್ಯದಲ್ಲಿ ಇದೇ ರೀತಿ ಮಾಡಿದ್ದ ಡೇವಿಡ್​ಗೆ ಎರಡು ಡಿಮೆರಿಟ್ ಪಾಯಿಂಟ್‌ಗಳ ನೀಡಿತ್ತು. ಒಟ್ಟಾರೆಯಾಗಿ ಮೂರು ಪಂದ್ಯಗಳಿಂದ ಟಿಮ್ ಐದು ಡಿಮೆರಿಟ್ ಅಂಕಗಳ ಪಡೆದಿದ್ದಾರೆ. ಹೀಗಾಗಿ ನಿಯಮಗಳ ಪ್ರಕಾರ ಟಿಮ್ ಅವರನ್ನು ಒಂದು ಪಂದ್ಯದಿಂದ ನಿಷೇಧ ಹೇರಲಾಗಿದೆ.

error: Content is protected !!