ಕಳೆದ ವರ್ಷದ ಕಾಲ್ತುಳಿತದ ಆತಂಕ: ಐಪಿಎಲ್ ಗೆದ್ದರೂ ಬೆಂಗಳೂರಿಗೆ ಬರಲ್ಲ ಆರ್‌ಸಿಬಿಯ ಚಾಂಪಿಯನ್ಸ್ ಪಡೆ!

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ 2026ರ ಮಹಾಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಭರ್ಜರಿಯಾಗಿ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆದರೆ, ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಅಭಿಮಾನಿಗಳಿಗೆ ದೊಡ್ಡ ಶಾಕ್ ಎದುರಾಗಿದೆ.

ಟ್ರೋಫಿ ಗೆದ್ದ ಸಂಭ್ರಮದಲ್ಲೂ ಆರ್‌ಸಿಬಿ ತಂಡವು ವಿಜಯೋತ್ಸವಕ್ಕಾಗಿ ಬೆಂಗಳೂರಿಗೆ ಆಗಮಿಸುತ್ತಿಲ್ಲ. ಮೂಲಗಳ ಪ್ರಕಾರ, ಕಳೆದ ವರ್ಷ ಬೆಂಗಳೂರಿನಲ್ಲಿ ಅಭಿಮಾನಿಗಳ ಅತಿಯಾದ ಸರಣಿ ಸಂಭ್ರಮಾಚರಣೆಯ ವೇಳೆ ನಡೆದಿದ್ದ ಭೀಕರ ಕಾಲ್ತುಳಿತದ ಕಹಿ ಘಟನೆಯೇ ಈ ಬಾರಿ ವಿಜಯಯಾತ್ರೆಯನ್ನು ರದ್ದುಗೊಳಿಸಲು ಮುಖ್ಯ ಕಾರಣ ಎನ್ನಲಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ನಡೆಯಬೇಕಿದ್ದ ಬೃಹತ್ ವಿಜಯೋತ್ಸವಕ್ಕೆ ಸುರಕ್ಷತೆಯ ಕಾರಣಗಳಿಂದಾಗಿ ಬ್ರೇಕ್ ಬಿದ್ದಿದೆ. ಈ ಬಾರಿ ಯಾವುದೇ ಅಹಿತಕರ ಘಟನೆ ಅಥವಾ ಕಾಲ್ತುಳಿತದಂತಹ ಪ್ರಾಣಾಪಾಯ ಮರುಕಳಿಸಬಾರದು ಎಂಬ ಮುನ್ನೆಚ್ಚರಿಕೆಯಿಂದಾಗಿ, ಫೈನಲ್ ಪಂದ್ಯ ಮುಗಿದ ತಕ್ಷಣ ಆಟಗಾರರೆಲ್ಲರಿಗೂ ಬೆಂಗಳೂರಿಗೆ ಬರುವ ಬದಲಿಗೆ ನೇರವಾಗಿ ತಮ್ಮ ತಮ್ಮ ಮನೆಗಳಿಗೆ ಮರಳುವಂತೆ ಮ್ಯಾನೇಜ್‌ಮೆಂಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

 

ತಂಡದ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ (Mo Bobat) ಈ ಕಠಿಣ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ದುರದೃಷ್ಟವಶಾತ್ ನಮ್ಮಲ್ಲಿ ಯಾರೂ ಸದ್ಯಕ್ಕೆ ಬೆಂಗಳೂರಿಗೆ ಹೋಗುತ್ತಿಲ್ಲ. ನಾನು ನಾಳೆಯೇ ಯುಕೆಗೆ (UK) ಮರಳುತ್ತಿದ್ದೇನೆ. ನಮ್ಮ ನಾಯಕ ರಜತ್ ಪಾಟಿದಾರ್ ಈಗಾಗಲೇ ತಮ್ಮ ಮನೆಗೆ ತೆರಳಲಿದ್ದಾರೆ ಮತ್ತು ಹೆಡ್ ಕೋಚ್ ಆಂಡಿ ಫ್ಲವರ್ ರಜೆ ಯೋಜಿಸಿದ್ದಾರೆ. ನಮ್ಮ ಅಭಿಮಾನಿಗಳ ಸಂಭ್ರಮದಲ್ಲಿ ಭಾಗಿಯಾಗಲು ನಾವು ಇನ್ನು ಕೆಲವು ದಿನಗಳ ಕಾಲ ಕಾಯಲೇಬೇಕಾಗಿದೆ” ಎಂದು ತಿಳಿಸಿದ್ದಾರೆ. ಮ್ಯಾನೇಜ್‌ಮೆಂಟ್ ಅಧಿಕೃತವಾಗಿ ಕಾಲ್ತುಳಿತದ ಕಾರಣವನ್ನು ಬಹಿರಂಗಪಡಿಸದಿದ್ದರೂ, ಒಳಗಿನ ವಲಯದಲ್ಲಿ ಸುರಕ್ಷತೆಯದ್ದೇ ದೊಡ್ಡ ಆತಂಕವಾಗಿತ್ತು ಎಂದು ತಿಳಿದುಬಂದಿದೆ.

error: Content is protected !!