
ಉಡುಪಿ: ಸರಕು ಸಾಗಟ ಲಾರಿಗೆ ಗೂಡ್ಸ್ ಟೆಂಪೋ ಹಿಂದುಗಡೆ ಗುದ್ದಿದ ಪರಿಣಾಮವಾಗಿ, ಟೆಂಪೋ ಚಾಲಕ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66, ಕಿನ್ನಿಮೂಲ್ಕಿ ಬಳಿ ಭಾನುವಾರ(ಮೇ 1) ನಸುಕಿನ ಜಾವದಲ್ಲಿ ನಡೆದಿದೆ.


ಶಿವಮೊಗ್ಗದ ಪ್ರಶಾಂತ್ ಪಿ(29) ಮೃತ ಚಾಲಕ.
ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಟೆಂಪೋ ಮುಂಭಾಗ ಸಂಪೂರ್ಣವಾಗಿ ಜಜ್ಜೀ ಹೋಗಿದ್ದು, ಸಿಲುಕಿಕೊಂಡಿರುವ ಚಾಲಕನ ಮೃತದೇಹ ಹೊರತೆಗೆಯಲು ಸಾಹಸ ಪಡಬೇಕಾಯಿತು. ಸಮಾಜಸೇವಕ ನಿತ್ಯಾನಂದ ಒಳಕಾಡು, ಸಂಚಾರಿ ಠಾಣೆಯ ಪೋಲಿಸರು ಹಾಗೂ ಸ್ಥಳೀಯರು ಮೃತದೇಹವನ್ನು ಹೊರತೆಗೆದಿದ್ದಾರೆ. ನಿಂತಿದ್ದ ಲಾರಿಗೆ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದಿರಬಹುದೆಂದು ಶಂಕಿಸಲಾಗಿದೆ.
ಮೃತದೇಹವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ರವಾನಿಸಲಾಗಿದೆ.