ಖಾಂಡ್ವಾ: ಪ್ರಾಣಿಗಳ ಮೇಲಿನ ಅತಿಯಾದ ಕರುಣೆ ಮತ್ತು ಸನಾತನ ಧರ್ಮದ ಉದಾತ್ತ ತತ್ವಗಳಿಗೆ ಆಕರ್ಷಿತನಾದ ಬಿಲಾಲ್ ಎಂಬ ಯುವಕ ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾನೆ. ಮತಾಂತರದ ಬಳಿಕ ಆತ ತನ್ನ ಹೆಸರನ್ನು ‘ವಿಶಾಲ್’ ಎಂದು ಬದಲಾಯಿಸಿಕೊಂಡಿದ್ದಾನೆ.

ವಿಶಾಲ್ ಚಿಕ್ಕ ವಯಸ್ಸಿನಿಂದಲೂ ರಾಜೇಶ್ ಸಾರಂಗ್ ಎಂಬುವವರ ಬಳಿ ಕೆಲಸ ಮಾಡುತ್ತಿದ್ದನು. ಅಲ್ಲಿ ಆತನನ್ನು ಕೆಲಸಗಾರನಂತೆ ನೋಡದೆ, ಕುಟುಂಬದ ಒಬ್ಬ ಸದಸ್ಯನಂತೆಯೇ ಅತ್ಯಂತ ಪ್ರೀತಿಯಿಂದ ಸಾಕಿ ಬೆಳೆಸಲಾಗಿತ್ತು. ಈ ಸಾಂಪ್ರದಾಯಿಕ ಮತ್ತು ಸೌಹಾರ್ದಯುತ ವಾತಾವರಣವು ಆತನ ಮನಸ್ಸಿನ ಮೇಲೆ ಬಾಲ್ಯದಿಂದಲೇ ಭಾರಿ ಪ್ರಭಾವ ಬೀರಿತ್ತು. ಹೀಗಾಗಿ ಆತನಿಗೆ ಹಿಂದೂ ಧರ್ಮದ ಆಚರಣೆಗಳ ಬಗ್ಗೆ ಮೊದಲಿನಿಂದಲೂ ವಿಶೇಷ ಆಸಕ್ತಿ ಮೂಡಿತ್ತು.

ಇತ್ತೀಚೆಗೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನಡೆದ ಮುಗ್ಧ ಪ್ರಾಣಿಗಳ ಬಲಿಯನ್ನು ಕಂಡು ಬಿಲಾಲ್ ತೀವ್ರವಾಗಿ ನೊಂದಿದ್ದನು. “ಆ ಮುಗ್ಧ ಪ್ರಾಣಿಗಳ ಪರಿಸ್ಥಿತಿಯನ್ನು ನನ್ನಿಂದ ಕಣ್ಣಾರೆ ನೋಡಲು ಸಾಧ್ಯವಾಗಲಿಲ್ಲ” ಎಂದು ಆತ ತನ್ನ ಅಳಲನ್ನು ತೋಡಿಕೊಂಡಿದ್ದಾನೆ. ಈ ಘಟನೆಯಿಂದ ಬೇಸತ್ತು, ಎಲ್ಲಾ ಜೀವಿಗಳ ಮೇಲಿನ ದಯೆಯನ್ನು ಸಾರುವ ಹಾಗೂ ಜಗತ್ತಿನ ಕಲ್ಯಾಣವನ್ನು ಬಯಸುವ ‘ಸರ್ವೇ ಭವಂತು ಸುಖಿನಃ’ ಎಂಬ ಸನಾತನ ಧರ್ಮದ ಸದ್ಧಾಂತಕ್ಕೆ ಮಾರುಹೋಗಿ ಆತ ಧರ್ಮ ಬದಲಿಸುವ ದೃಢ ನಿರ್ಧಾರ ಕೈಗೊಂಡಿದ್ದಾನೆ.
ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಖಾಂಡ್ವಾದ ಪ್ರಸಿದ್ಧ ದೇವಸ್ಥಾನದಲ್ಲಿ ಬಿಲಾಲ್‌ನನ್ನು ಹಿಂದೂ ಧರ್ಮಕ್ಕೆ ಬರಮಾಡಿಕೊಳ್ಳಲು ಸಾಂಪ್ರದಾಯಿಕ ‘ಘರ್ ವಾಪಸಿ’ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಧರ್ಮದ ನಿಯಮಗಳ ಪ್ರಕಾರ ಆತನಿಗೆ ಪಂಚಗವ್ಯ, ಗಂಗಾಜಲ ಮತ್ತು ಪವಿತ್ರ ದ್ರವ್ಯಗಳಿಂದ ಹತ್ತು ವಿಧದ ಶುದ್ಧೀಕರಣ ಸ್ನಾನ ಮಾಡಿಸಲಾಯಿತು. ಆ ಬಳಿಕ ಆತ ತಲೆ ಬೋಳಿಸಿಕೊಂಡು ವೈದಿಕ ಯಜ್ಞ (ಹೋಮ) ಮತ್ತು ಶಿವಪೂಜೆಯಲ್ಲಿ ಅತ್ಯಂತ ಭಕ್ತಿಯಿಂದ ಪಾಲ್ಗೊಂಡಿದ್ದಾನೆ.

ರಾಮಚರಿತಮಾನಸ ಗ್ರಂಥದ ಮೇಲೆ ಪ್ರತಿಜ್ಞೆ
ಇನ್ಮುಂದೆ ತಾನು ಸಂಪೂರ್ಣವಾಗಿ ಸನಾತನ ಧರ್ಮದ ನಿಯಮಗಳನ್ನು ಪಾಲಿಸುವುದಾಗಿ ವಿಶಾಲ್ ಪ್ರಮಾಣ ಮಾಡಿದ್ದಾನೆ. ಅತ್ಯಂತ ಶ್ರದ್ಧೆಯಿಂದ ಪವಿತ್ರ ‘ರಾಮಚರಿತಮಾನಸ’ ಗ್ರಂಥವನ್ನು ತನ್ನ ಹಣೆಯ ಮೇಲಿಟ್ಟುಕೊಂಡು, ಇನ್ಮುಂದೆ ದಿನವೂ ತಪ್ಪದೇ ಅದರ ಪಠಣ ಮಾಡುವುದಾಗಿ ಆತ ಪವಿತ್ರ ಪ್ರತಿಜ್ಞೆ ಸ್ವೀಕರಿಸಿದ್ದಾನೆ. “ನನಗೆ ಸನಾತನ ಧರ್ಮ ತುಂಬಾ ಇಷ್ಟ, ನಾನು ಮೊದಲಿನಿಂದಲೂ ಅದರ ಆಚರಣೆಗಳನ್ನು ಅನುಸರಿಸುತ್ತಿದ್ದೇನೆ. ನಾನು ಈ ಧರ್ಮಕ್ಕೆ ಸೇರಲೇಬೇಕಿತ್ತು” ಎಂದು ವಿಶಾಲ್ ಹೆಮ್ಮೆಯಿಂದ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾನೆ.