ಬಿಡುಗಡೆಗೊಂಡ ಒಂದೇ ತಿಂಗಳಿಗೆ ಒಟಿಟಿಗೆ ಎಂಟ್ರಿ ಕೊಟ್ಟ ಕೆಡಿ ಸಿನಿಮಾ!!

ಕೆಡಿ ಸಿನಿಮಾ: ಕಳೆದ ತಿಂಗಳಷ್ಟೇ ರಿಲೀಸ್‌ ಆಗಿದ್ದ ಕೆಡಿ ಸಿನಿಮಾ, ಇದೀಗ ಒಟಿಟಿಗೆ ಲಗ್ಗೆಯನ್ನಿಡುತ್ತಿದೆ.

ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಯಲ್ಲಿ ಕೆಡಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದ್ದು, ಎಲ್ಲಿ ಮತ್ತು ಯಾವಾಗ ಅನ್ನೋದನ್ನು ಕೂಡ ಅಧಿಕೃತವಾಗಿ ರಿವೀಲ್ ಮಾಡಲಾಗಿದೆ.

ಜೀ-5 ಯಲ್ಲಿ ಕೆಡಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದ್ದು, ಮುಂದಿನ ತಿಂಗಳು ಜೂನ್-5 ರಂದು ಈ ಚಿತ್ರದ ಸ್ಟ್ರೀಮಿಂಗ್ ಪ್ಲಾನ್ ಆಗಿದೆ. ಜೀ-5 ಕನ್ನಡದಲ್ಲಿಯೇ ಇದು ಪ್ರಸಾರ ಆಗುತ್ತಿದೆ ಹಾಗೂ ಚಿತ್ರದ ಒಂದು ಹೊಸ ಪೋಸ್ಟರ್ ಕೂಡ ಹೊರ ಬಂದಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಕೆಡಿ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಚಿತ್ರದ ಪ್ರಮುಖ ರೋಲ್ ಮೂಲಕ ಕಾಣಿಸಿಕೊಳ್ಳುವುದರ ಜೊತೆಗೆ ಶಿಲ್ಪಾ ಶೆಟ್ಟಿ ಅವರು ಸಂಜಯ್ ದತ್ ಪತ್ನಿ ಪಾತ್ರ ನಟಿಸಿದ್ದಾರೆ. ಹಾಗೆಯೇ ಮಚ್ಚ್‌ಲಕ್ಷ್ಮಿ ಪಾತ್ರದಲ್ಲಿ ನಟಿ ರೀಷ್ಮಾ ನಾಣಯ್ಯ ಸಖತ್ ಆಗಿಯೇ ಆ್ಯಕ್ಟಿಂಗ್ ಮಾಡಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪಾತ್ರಕ್ಕೆ ಹೋಲಿಸಿದರೆ ಇದು ವಿರುದ್ಧವಾಗಿಯೇ ಇದೆ. ಆದರೆ, ಚಿತ್ರ ಹೋಗ್ತಾ ಹೋಗ್ತಾ ಇದು ಸೂಕ್ತವಾದ ಪಾತ್ರವೇ ಅನಿಸುತ್ತದೆ.

error: Content is protected !!