ಕುಮಾರಧಾರ ನದಿಗೆ ಈಜಲು ತೆರಳಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾ*ವು!!

ಪುತ್ತೂರು : ಕುಮಾರಧಾರ ನದಿಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ(ಮೇ 21) ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ಕಟಾರ ಸಮೀಪದ ನಡೆದಿದೆ.

ಗದಗ ಮೂಲದ ಕಿರಣ್ ಮೃತ ವಿದ್ಯಾರ್ಥಿ.

ಮೇ 21ರಂದು ಸಂಜೆ ಸುಮಾರು 5:20ರ ವೇಳೆಗೆ ವಿವೇಕಾನಂದ ಫಾರ್ಮಾಸಿಟಿಕಲ್ ಕಾಲೇಜಿನ ದ್ವಿತೀಯ ವರ್ಷದ ಫಾರ್ಮಸಿ ವಿಭಾಗದ ನಾಲ್ವರು ವಿದ್ಯಾರ್ಥಿಗಳು ಕುಮಾರಧಾರ ನದಿಗೆ ಈಜಲು ತೆರಳಿದ್ದರು. ಈ ವೇಳೆ ವಿದ್ಯಾರ್ಥಿಗಳಾದ ಗದಗ ಮೂಲದ ಕಿರಣ್, ಸ್ಥಳೀಯ ಉಪ್ಪಿನಂಗಡಿಯ ಹರ್ಷಿತ್, ಮೈಸೂರು ಮೂಲದ ತೇಜಸ್ ಹಾಗೂ ಸಚಿನ್ ನದಿಯಲ್ಲಿ ಈಜುತ್ತಿದ್ದ ಸಂದರ್ಭ ಅವಘಡ ಸಂಭವಿಸಿದೆ. ಈ ವೇಳೆ ಕಿರಣ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಉಳಿದ ಮೂವರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

error: Content is protected !!