
ಮುಂಬೈ: ಮುಂಬೈ ಮಹಾನಗರದಲ್ಲಿ ಭಾರೀ ಮಳೆಗೆ ಬಲಿಯಾದವರ ಸಂಖ್ಯೆ 13ಕ್ಕೇರಿದೆ. ದಕ್ಷಿಣ ಮುಂಬೈನಲ್ಲಿ ಕಳೆದ 50 ವರ್ಷಗಳಲ್ಲಿಯೇ ಗರಿಷ್ಠ ಮಳೆ ದಾಖಲಾಗಿದೆ.
ಈ ಪೈಕಿ ಮುಂಬೈನ ಮನ್‌ಖುರ್ಡ್ ಎಂಬ ಪ್ರದೇಶದಲ್ಲಿ ಭಾರಿ ಮಳೆಗೆ ಮೂರು ಮಹಡಿಯ ಕಟ್ಟಡ ಗುಡಿಸಲಿನ ಮೇಲೆ ಬಿದ್ದು , 6 ಮಂದಿ ಸಾವನ್ನಪ್ಪಿದ್ದಾರೆ.

ಗುಡಿಸಿಲಿನಲ್ಲಿದ್ದ 5 ಮಕ್ಕಳು ಸಾವನ್ನಪ್ಪಿದ್ದು, ಒಬ್ಬರು ಮಹಿಳೆ ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಯಗೊಂಡಿದ್ದು ಆಸ್ಪತ್ರೆ ದಾಖಲಾಗಿದ್ದಾರೆ. ಕುರ್ಲಾ ಪ್ರದೇಶದ ಗೋಮ್ಸ್ ಗೌನ್ ನ ನವಪಾದ ಪ್ರದೇಶದಲ್ಲಿ 63 ವರ್ಷದ ಯೂನಸ್ ಕುಂದಾವಾಲ ಎಂಬ ವ್ಯಕ್ತಿಯ ಅಂಗಡಿ ಮೇಲೆ ಭಾರೀ ಮರ ಬಿದ್ದು ಸಾವನ್ನಪ್ಪಿದ್ದಾರೆ. ಇದೇ ಘಟನೆಯಲ್ಲಿ 18 ವರ್ಷದ ಕುಮಾರ್ ಹಸನ್ ರಾಜಾ ಮರದ ಕೊಂಬೆ ಬಿದ್ದು, ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ತಕ್ಷಣ ಕರೆದುಕೊಂಡು ಹೋದರೂ ಜೀವ ಉಳಿಯಲಿಲ್ಲ.

ಭಾನುವಾರ ಭಾರಿ ಮಳೆಯಾಗಿದ್ದು 24 ಗಂಟೆ ಅವಧಿಯಲ್ಲಿ ಮುಂಬೈ ನಗರದಲ್ಲಿ 200 ಮಿ.ಮೀಗಿಂತ ಹೆಚ್ಚು ಮಳೆ ದಾಖಲಾಗಿದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.
ಭಾರಿ ಮಳೆಯ ಹಿನ್ನೆಲೆ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಹಲವಾರು ತಗ್ಗು ಪ್ರದೇಶಗಳು ಜಲಾವೃತವಾಗಿದೆ.

ಬೃಹತ್ ಮುಂಬೈ ಕಾರ್ಪೊರೇಷನ್ ಮುಂಬೈ, ರಾಯಘಡ, ಥಾಣೆಯಲ್ಲಿ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆ ಎಲ್ಲಾ ಸರಕಾರಿ, ಖಾಸಗಿ ಹಾಗೂ ನಾಗರಿಕ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
