ತೋಕೂರು ಮೈದಾನದಲ್ಲಿ 36ನೇ ವರ್ಷದ ಶ್ರೀ ಸುಬ್ರಹ್ಮಣ್ಯ ಟ್ರೋಫಿ-2026


ತೋಕೂರು : ಕ್ರೀಡೆಯನ್ನು ಸಂಘಟಿಸುವ ಮೂಲಕ ಯುವ ಸಮುದಾಯವನ್ನು ಸದೃಢವಾಗಿ ರೂಪಿಸಬಹುದು ಎಂದು ಶ್ರೀ ಧರ್ಮಶಾಸ್ತ ಭಕ್ತವೃಂದ, ಬಾಂದ್ರ (ಮುಂಬೈ) ಅಧ್ಯಕ್ಷ ರಾಮಣ್ಣ ದೇವಾಡಿಗ ಹೇಳಿದರು.

ತೋಕೂರು ಮೈದಾನದಲ್ಲಿ ಆಯೋಜಿಸಲಾಗಿದ್ದ 36ನೇ ವರ್ಷದ *ಶ್ರೀ ಸುಬ್ರಹ್ಮಣ್ಯ ಟ್ರೋಫಿ-2026* ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಪಂದ್ಯಾಟದಲ್ಲಿ ಸೋಲು-ಗೆಲುವು ಸಾಮಾನ್ಯ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಾಡಿಗ ಸಂಘ (ಮೂಡಬಿದ್ರೆ) ಅಧ್ಯಕ್ಷ ಪುರಂದರ ದೇವಾಡಿಗ, ಗ್ರಾಮೀಣ ಯುವಕರಿಗೆ ಸಾಧನೆಯ ಅವಕಾಶ ನೀಡುವುದರಿಂದ ಅವರು ಗ್ರಾಮದ ಆಸ್ತಿಯಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ಶ್ರೀ ಸುಬ್ರಹ್ಮಣ್ಯ ಟ್ರೋಫಿ-2026 ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಫ್ರೆಂಡ್ಸ್ ಇಂದಿರಾನಗರ ತಂಡವು ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟ ಅಲಂಕರಿಸಿತು. ಫ್ರೆಂಡ್ಸ್ ಕೊಪ್ಪಲ ತಂಡವು ದ್ವಿತೀಯ ಸ್ಥಾನ ಪಡೆಯಿತು.

ಸರಣಿ ಶ್ರೇಷ್ಠ: ಅಜೀಜ್

ಪಂದ್ಯಶ್ರೇಷ್ಠ: ರಾಕೇಶ್

ಉತ್ತಮ ದಾಂಡಿಗ: ಕಲಾಂಧರ್

ಉತ್ತಮ ಬೌಲರ್: ಶಕೀಲ್

ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಮೇರಾ ಯುವ ಭಾರತ್, ದ.ಕ. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಾರ್ಗದರ್ಶನದಲ್ಲಿ ಈ ಪಂದ್ಯಾಟ ನಡೆಯಿತು.

error: Content is protected !!