ಮಂಗಳೂರಿನಲ್ಲಿ ತಾಯಿ-ಮಗು ನಾಪತ್ತೆ: ಪತ್ತೆಗಾಗಿ ಕಾವೂರು ಪೊಲೀಸರ ಮನವಿ

ಮಂಗಳೂರು: ನಗರದ ಬಂಗ್ರ ಕೂಳೂರು ದಂಬೆಲ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದ ಯುವತಿಯೊಬ್ಬರು ತನ್ನ ಒಂದು ವರ್ಷದ ಮಗನೊಂದಿಗೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಬಳ್ಳಾರಿ ಮೂಲದ ರಕ್ಷಿತಾ ಎಂ (21) ಮತ್ತು ಅವರ ಮಗ ಆದರ್ಶ್ ನಾಪತ್ತೆಯಾದವರು.

ಮೇ 9 ರಂದು ತನ್ನ ಮಗನೊಂದಿಗೆ ಮನೆಯಿಂದ ಹೊರಟ ರಕ್ಷಿತಾ ಅವರು ಈವರೆಗೆ ಮರಳಿ ಬಂದಿಲ್ಲ. ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.

ನಾಪತ್ತೆಯಾದವರ ಚಹರೆ ವಿವರ:

  • ಎತ್ತರ: ಸುಮಾರು 5.0 ಅಡಿ

  • ದೇಹದಾರ್ಢ್ಯ: ಸಾಧಾರಣ ಶರೀರ, ಕೋಲು ಮುಖ

  • ವಿಶೇಷ ಗುರುತು: ಬಲ ಕೈಯಲ್ಲಿ ‘A’ ಎಂಬ ಹಚ್ಚೆ (Tattoo) ಗುರುತು ಇರುತ್ತದೆ.

  • ಮಾತನಾಡುವ ಭಾಷೆ: ಲಂಬಾಣಿ ಮತ್ತು ಕನ್ನಡ

ಚಿತ್ರದಲ್ಲಿರುವ ಮಹಿಳೆ ಹಾಗೂ ಮಗುವಿನ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಸಾರ್ವಜನಿಕರು ತಕ್ಷಣವೇ ಕಾವೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಸಹಕರಿಸಬೇಕಾಗಿ ಕೋರಲಾಗಿದೆ.

error: Content is protected !!