ಸರಣಿ ಅಪಘಾತ; 3 ಕಾರುಗಳು ಜಖಂ

ಸುಳ್ಯ: 3 ಕಾರುಗಳ ನಡುವೆ ಸರಣಿ ಅಪಘಾತ ಉಂಟಾಗಿ ಕಾರುಗಳು ಜಖಂಗೊಂಡಿರುವ ಘಟನೆ ದೇವರಕೊಲ್ಲಿ ಯಲ್ಲಿ ಸಂಭವಿಸಿದೆ.

ಸುಳ್ಯ ಕಡೆಯಿಂದ ಮಡಿಕೇರಿಯತ್ತ ಹೋಗುತ್ತಿದ್ದ ಕಾರಿಗೆ ಮಡಿಕೇರಿಯಿಂದ ಸುಳ್ಯ ಕಡೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು, ಈ ಸಂದರ್ಭದಲ್ಲಿ ಚಾಲಕ ಬ್ರೇಕ್ ಹಾಕಿದಾಗ ಅದರ ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಕಾರು ಈ ಕಾರಿಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.

ಘಟನೆಯಲ್ಲಿ ಮೂರೂ ಕಾರುಗಳು ಜಖಂಗೊಂಡಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

error: Content is protected !!