5 ಕೋಟಿ ಜನರನ್ನು ಕೊಂದ ಇತಿಹಾಸ ಮರುಕಳಿಸುತ್ತಾ? ಅಕ್ಟೋಬರ್‌ನಿಂದ ಭೂಮಿಗೆ ಕಂಟಕವಾಗಲಿದೆ ಮಹಾ ‘Super El Niño’!

ವಾಷಿಂಗ್ಟನ್: ಪ್ರಕೃತಿ ಮುನಿದರೆ ಮಾನವನ ಸಾಮ್ರಾಜ್ಯ ಎಷ್ಟು ಧೂಳೀಪಟವಾಗಬಹುದು ಎಂಬುದಕ್ಕೆ ಇಡೀ ಭೂಮಿಯ ಇತಿಹಾಸದಲ್ಲೇ ಅತ್ಯಂತ ಭಯಾನಕ ಮುನ್ಸೂಚನೆಯೊಂದು ಸಿಕ್ಕಿದೆ! ಅಮೆರಿಕದ ಪ್ರಖ್ಯಾತ ವಿಜ್ಞಾನಿಗಳ ಸಂಸ್ಥೆ NOAA ಬಿಡುಗಡೆ ಮಾಡಿರುವ ವರದಿ ಇಡೀ ವಿಶ್ವವನ್ನೇ ನಡುಗಿಸಿದೆ. ಮುಂಬರುವ 2026ರ ಅಕ್ಟೋಬರ್‌ನಿಂದ 2027ರ ಫೆಬ್ರವರಿ ಅವಧಿಯಲ್ಲಿ ಭೂಮಿಗೆ ಅಪ್ಪಳಿಸಲಿರುವ ಮಹಾ ʻಸೂಪರ್ ಎಲ್ ನಿನೋ’ (Super El Niño), ಕೇವಲ ಹವಾಮಾನ ವೈಪರೀತ್ಯವಲ್ಲ; ಅದು ಇಡೀ ಮಾನವ ಕುಲದ ಆಹಾರ, ನೀರು ಮತ್ತು ಬದುಕಿನ ಭದ್ರತೆಯನ್ನೇ ನುಂಗಿ ನೀರು ಕುಡಿಯಲು ಬರುತ್ತಿರುವ ಜಾಗತಿಕ ಮಾರಿ!

ಉಷ್ಣವಲಯದ ಪೆಸಿಫಿಕ್ ಮಹಾಸಾಗರದ ಆಳದಲ್ಲಿ ತಾಪಮಾನವು ಅತ್ಯಂತ ಅಪಾಯಕಾರಿ ಮಟ್ಟಕ್ಕೆ ಏರುತ್ತಿದೆ. ಸಮುದ್ರದ ಮೇಲ್ಮೈ ತಾಪಮಾನವು ಸಾಮಾನ್ಯಕ್ಕಿಂತ ಬರೋಬ್ಬರಿ 3.6 ಡಿಗ್ರಿ ಫ್ಯಾರನ್‌ಹೀಟ್ (2 ಡಿಗ್ರಿ ಸೆಲ್ಸಿಯಸ್) ನಷ್ಟು ಹೆಚ್ಚಾಗಲಿದ್ದು, ಇದು ಸಾಗರಗಳನ್ನು ಕುದಿಯುವಂತೆ ಮಾಡಲಿದೆ. ವಿಜ್ಞಾನಿಗಳ ಪ್ರಕಾರ, ಇದು 1870ರ ದಶಕದ ನಂತರ ಭೂಮಿ ಕಾಣಲಿರುವ ಅತ್ಯಂತ ಭೀಕರ ಹಾಗೂ ವಿನಾಶಕಾರಿ ಎಲ್ ನಿನೋ ವಿದ್ಯಮಾನವಾಗಲಿದೆ. ಜುಲೈ ಒಳಗಾಗಿ ಇಡೀ ಜಗತ್ತು ಈ ತಾಪಮಾನದ ಜಾಲಕ್ಕೆ ಸಿಲುಕುವುದು ಶೇ. 82 ರಷ್ಟು ಖಚಿತವಾಗಿದ್ದು, ಮುಂದಿನ ವರ್ಷದವರೆಗೂ ಭೂಮಿ ಬೆಂಕಿಯ ಉಂಡೆಯಾಗಲಿದೆ.

“ಅಂದು ಭೂಮಿ ಇಷ್ಟು ಬಿಸಿಯಾಗಿರಲಿಲ್ಲ, ಆದರೂ 5 ಕೋಟಿ ಜನ ಹೆಣವಾದರು. ಇಂದು ಸಾಗರಗಳು ಈಗಾಗಲೇ ಕುದಿಯುತ್ತಿವೆ, ಹಾಗಿದ್ದಲ್ಲಿ ಎದುರಾಗಲಿರುವ ವಿನಾಶದ ತೀವ್ರತೆ ಊಹೆಗೂ ನಿಲುಕದ್ದು!”

ವಿಜ್ಞಾನಿಗಳನ್ನು ರಾತ್ರಿ ನಿದ್ದೆ ಗೆಡಿಸಿರುವುದು 1877ರ ಆ ಕರಾಳ ಇತಿಹಾಸ. ಅಂದು ಸಂಭವಿಸಿದ ಇಂತಹದ್ದೇ ಒಂದು ʻಸೂಪರ್ ಎಲ್ ನಿನೋ’ ಜಗತ್ತಿನಾದ್ಯಂತ ಭೀಕರ ಜಾಗತಿಕ ಕ್ಷಾಮವನ್ನು (Global Famine) ಸೃಷ್ಟಿಸಿತ್ತು. ಹನಿ ನೀರಿಲ್ಲದೆ, ತಿನ್ನಲು ಅನ್ನವಿಲ್ಲದೆ ಇಡೀ ಭೂಮಿಯ ಅಂದಿನ ಜನಸಂಖ್ಯೆಯ ಶೇಕಡಾ 3 ರಷ್ಟು, ಅಂದರೆ ಬರೋಬ್ಬರಿ 5 ಕೋಟಿಗೂ ಅಧಿಕ ಜನ ನರಳಿ ನರಳಿ ರಸ್ತೆಯಲ್ಲೇ ಹೆಣವಾಗಿ ಬಿದ್ದಿದ್ದರು. ಈಗ ಸೃಷ್ಟಿಯಾಗುತ್ತಿರುವ ಸೂಪರ್ ಎಲ್ ನಿನೋ ಆ ಹಳೆಯ ಸಾವಿನ ಸರಣಿಯನ್ನೇ ಮರುಕಳಿಸುವ ಎಲ್ಲ ಲಕ್ಷಣಗಳನ್ನು ತೋರಿಸುತ್ತಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

ಈ ಸೂಪರ್ ಎಲ್ ನಿನೋ ಅಪ್ಪಳಿಸಿದರೆ ಇಡೀ ಜಗತ್ತಿನ ಕೃಷಿ ವ್ಯವಸ್ಥೆ ಸಂಪೂರ್ಣ ಧ್ವಂಸವಾಗಲಿದೆ. ಒಂದು ಕಡೆ ಮಳೆಯಿಲ್ಲದೆ ಕೋಟ್ಯಂತರ ಎಕರೆ ಬೆಳೆ ಒಣಗಿ ಬೂದಿಯಾದರೆ, ಇನ್ನೊಂದೆಡೆ ಜಗತ್ತಿನ ಕೆಲವು ಭಾಗಗಳಲ್ಲಿ ಅನಿರೀಕ್ಷಿತ ಮಹಾ ಪ್ರವಾಹ ಸೃಷ್ಟಿಯಾಗಿ ನಗರಗಳೇ ಕೊಚ್ಚಿ ಹೋಗಲಿವೆ. ಅಮೆರಿಕದ ವಿಜ್ಞಾನಿಗಳ ಪ್ರಕಾರ, ಭೀಕರ ಕಾಡ್ಗಿಚ್ಚು (Wildfires) ಮತ್ತು ಸರಣಿ ಚಂಡಮಾರುತಗಳು ಇಡೀ ದೇಶಗಳನ್ನು ನಡುಗಿಸಲಿವೆ. ಈಗಾಗಲೇ ಮಧ್ಯಪ್ರಾಚ್ಯದಲ್ಲಿ ಯುದ್ಧಗಳು ನಡೆಯುತ್ತಿದ್ದು, ಇದರ ಮಧ್ಯೆ ಆಹಾರದ ಬೆಲೆಗಳು ಗಗನಕ್ಕೇರಿದರೆ, ಇಡೀ ವಿಶ್ವದಲ್ಲಿ ಹಿಂದೆಂದೂ ಕಾಣದ ಭೀಕರ ಮಾನವೀಯ ಸಂಕಟ ಮತ್ತು ಹಸಿವಿನ ಮಹಾ ತಾಂಡವ ಸೃಷ್ಟಿಯಾಗುವುದು ಗ್ಯಾರಂಟಿ.

error: Content is protected !!