ಮಂಗಳೂರು: ರಾಘವೇಂದ್ರ ಸ್ಟುಡಿಯೋ ಪ್ರೆಸೆಂಟ್ಸ್ ಹಾಗೂ ಕೋಸ್ಟಲ್ ಫಿಲಂಸ್ ಸಹಯೋಗದಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಆಧರಿಸಿಕೊಂಡು ನಿರ್ಮಾಣವಾಗುತ್ತಿರುವ ಕನ್ನಡ ಟೆಲಿಫಿಲ್ಮ್ “ಮೋನಾಲಿಸಾ – Is In Trouble” ಚಿತ್ರದ ಪ್ರೇಮಿಯರ್ ಪ್ರದರ್ಶನ ಮೇ 15, 16 ಹಾಗೂ 17 ರಂದು ಮಂಗಳೂರಿನ ಭಾರತ ಸಿನೆಮಾಸ್ ನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕ ನ್ಯಾಯವಾದಿ ನವೀನ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಪ್ರತಿಭೆಗಳ ತಂಡದ ಮೂಲಕ ಸಿದ್ಧವಾಗುತ್ತಿರುವ ಈ ಟೆಲಿಫಿಲ್ಮ್ ಸಮಾಜದಲ್ಲಿ ನಡೆಯುತ್ತಿರುವ ಕೆಲವು ಗಂಭೀರ ವಿಚಾರಗಳನ್ನು ಮನಮುಟ್ಟುವ ರೀತಿಯಲ್ಲಿ ಪ್ರೇಕ್ಷಕರ ಮುಂದಿಡುವ ಪ್ರಯತ್ನ ಮಾಡಲಾಗಿದೆ ಎಂದರು.

ಮಂಗಳೂರಿನ ಸುತ್ತಮುತ್ತ ಪರಿಸರದಲ್ಲಿ ಚಿತ್ರೀಕರಣಗೊಂಡ ಈ ಚಿತ್ರದಲ್ಲಿ ಸಾಮಾಜಿಕ ಜಾಗೃತಿಯ ಅಂಶಗಳೂ ಸೇರಿಕೊಂಡಿವೆ. ಚಿತ್ರವನ್ನು ಬೃಂದಾವನ್ ಎನ್ ಶೆಟ್ಟಿ ನಿರ್ದೇಶಿಸುತ್ತಿದ್ದು, ಕಥೆ ಮತ್ತು ಚಿತ್ರಕಥೆಯನ್ನು ಶ್ರೇಯಸ್ ಕುಮಾರ್ ಫರಂಗಿಪೇಟೆ ರಚಿಸಿದ್ದಾರೆ. ಮಂಗಳೂರಿನ ಹಲವು ಪ್ರತಿಭಾವಂತ ಕಲಾವಿದರು ಹಾಗೂ ತಾಂತ್ರಿಕರು ಚಿತ್ರದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ರಂಗಿತರಂಗ ಖ್ಯಾತಿಯ ಕಾರ್ತಿಕ್ ವಿ ಆರ್ , ಯಜ್ಞೇಶ್ ಬರ್ಕೆ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರೀಕರಣವು ಮೇ 15ರಂದು ಶುಕ್ರವಾರ ಸಂಜೆ 5ರಿಂದ 7ರವರೆಗೆ , ಮೇ 16ರಂದು ಶನಿವಾರ ಸಂಜೆ 4ರಿಂದ 7ರವರೆಗೆ ಹಾಗೂ ಮೇ 17ರಂದು ಸಂಜೆ 4ರಿಂದ 7ರವರೆಗೆ ನಡೆಯಲಿದೆ. ಚಿತ್ರದ ಟಿಕೆಟ್‌ಗಳನ್ನು ಪ್ರೀ-ಬುಕಿಂಗ್ ಆಧಾರದ ಮೇಲೆ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶ್ರೇಯಸ್ ಕುಮಾರ್ ಫರಂಗಿಪೇಟೆ (93533 91426) ಹಾಗೂ ಬೃಂದಾವನ್ ಎನ್ ಶೆಟ್ಟಿ (80887 01742) ಅವರನ್ನು ಸಂಪರ್ಕಿಸಬಹುದು.

ಸುದ್ದಿಗೋಷ್ಠಿಯಲ್ಲಿ ಶ್ರೇಯಸ್ ಕುಮಾರ್ ಫರಂಗಿಪೇಟೆ, ಬೃಂದಾವನ್ ಎನ್ ಶೆಟ್ಟಿ, ವಿನುತಾ ಸಿ. ನಾಯಕ್, ನ್ಯಾಯಾವಾದಿ ಪ್ರಸಾದ್ ಪಾಲನ್, ದಿನೇಶ್ ಕೋಟ್ಯಾನ್ , ಅನುರಾಧ ನಿಲಯ ಸಾವ್ಯ, ದೇವಿಪ್ರಸಾದ್ ಕೊಂಚಾಡಿ, ಅಭಿನವ್ ಉಪಸ್ಥಿತರಿದ್ದರು.