ಮೇ 12: ತೋಕೂರು ಶ್ರೀ ಸುಬ್ರಹ್ಮಣ್ಯ ದೇವರ ಪ್ರತಿಷ್ಠಾಪನಾ ಮಹೋತ್ಸವ ವರ್ಷಾಚರಣೆ

ಮುಲ್ಕಿ: ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿಶ್ರೀ ಸುಬ್ರಹ್ಮಣ್ಯ ದೇವರ ಪ್ರತಿಷ್ಠಾಪನಾ ಮಹೋತ್ಸವದ ವರ್ಷಾಚರಣೆ ಮಂಗಳವಾರ(ಮೇ 12) ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.

ಮೇ 12 ರ ಬೆಳಿಗ್ಗೆ 6ಕ್ಕೆ ದೇವರಿಗೆ ಪಂಚಾಮೃತ ಅಭಿಷೇಕ, ಬೆಳಿಗ್ಗೆ 10.05ಕ್ಕೆ ಮಿಥುನ ಲಗ್ನದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ನವಚತ್ವಾರಿಂಷತ್ ಕಲಶಾಭಿಷೇಕ, ಪ್ರಸನ್ನ ಪೂಜೆ,ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ 6 ಕ್ಕೆ ದೊಡ್ಡರಂಗಪೂಜೆ, ರಾತ್ರಿ 7 ಕ್ಕೆ ಬಲಿ ಮಹೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರಾದ ಟಿ ಕೆ ಮಧುಸೂದನ ಆಚಾರ್ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಗುರುರಾಜ್ ಎಸ್ ಪೂಜಾರಿ, ಸದಸ್ಯರಾದ ಪುರುಷೋತ್ತಮ ಕೋಟ್ಯಾನ್, ಅಶೋಕ್ ಕುಂದರ್, ಸಂಪತ್ ಜೆ ಶೆಟ್ಟಿ ತೋಕೂರುಗುತ್ತು, ವಿಶ್ವನಾಥ, ಭಾಸ್ಕರ್ ದೇವಾಡಿಗ, ಸವಿತಾ ಬೆಳ್ಳಾಯರು, ಶೋಭಾ ವಿ ಅಂಚನ್ ಮತ್ತು ಗ್ರಾಮಸ್ಥರಾದ ಹರಿದಾಸ್ ಭಟ್, ರಾಮಣ್ಣ ದೇವಾಡಿಗ ಮುಂಬೈ, ಪುರುಷೋತ್ತಮ ರಾವ್, ವ್ಯಾಸರಾವ್ ಚೆನ್ನೈ ಮತ್ತು ಸಹೋದರರು ಹಾಗೂ ಊರಿನ ಗ್ರಾಮಸ್ಥರು. ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.

error: Content is protected !!