ಷೇರುಪೇಟೆ ಸೂಚ್ಯಂಕ ಅಂಕ ಕುಸಿತ: 10 ಲಕ್ಷ ಕೋಟಿ ರೂ. ನಷ್ಟ

ಮುಂಬೈ: ಜಾಗತಿಕ ಬೆಳವಣಿಗೆ, ಕಚ್ಛಾ ತೈಲ ಬೆಲೆ ಏರಿಕೆ ಹಾಗೂ ಡಾಲರ್‌ ಎದುರು ರೂಪಾಯಿ ಮೌಲ್ಯ ದಾಖಲೆಯ ಕುಸಿತದ ಪರಿಣಾಮ ಇಂದು(ಮೇ 12) ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬರೋಬ್ಬರಿ 1,400ಕ್ಕೂ ಅಧಿಕ ಅಂಕಗಳ ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.


ಸಂವೇದಿ ಸೂಚ್ಯಂಕ 1,456 ಅಂಕಗಳ ಇಳಿಕೆಯೊಂದಿಗೆ 74,559 ಅಂಕಗಳ ಮಟ್ಟದಲ್ಲಿ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್‌.ಎಸ್‌.ಇ ನಿಫ್ಟಿ ಕೂಡಾ 436 ಅಂಕಗಳ ಕುಸಿತದೊಂದಿಗೆ 23,379 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ.
ಷೇರುಪೇಟೆಯ ಸಂವೇದಿ ಸೂಚ್ಯಂಕ, ನಿಫಿ ಭಾರೀ ಪ್ರಮಣದಲ್ಲಿ ಕುಸಿತ ಕಂಡ ಪರಿಣಾಮ ಹೂಡಿಕೆದಾರರ ಅಂದಾಜು 10 ಲಕ್ಷ ಕೋಟಿ ರೂಪಾಯಿ ಆದಾಯ ಕರಗಿ ಹೋದಂತಾಗಿದೆ ಎಂದು ಷೇರುಪೇಟೆ ವರದಿ ತಿಳಿಸಿದೆ.


ಇಂದಿನ ವಹಿವಾಟಿನಲ್ಲಿ ಶ್ರೀರಾಮ್‌ ಫೈನಾನ್ಸ್‌, ಅದಾನಿ ಪೋರ್ಟ್ಸ್‌, ಟೆಕ್‌ ಮಹೀಂದ್ರ, ಎಚ್‌ ಸಿಎಲ್‌ ಟೆಕ್‌, ಟಿಸಿಎಸ್‌, ವಿಪ್ರೋ ಷೇರುಗಳು ನಷ್ಟ ಕಂಡಿದೆ. ಸಂವೇದಿ ಸೂಚ್ಯಂಕ, ನಿಫ್ಟಿ ಭಾರೀ ಇಳಿಕೆಯ ನಡುವೆಯೂ ಹಿಂಡಲ್ಕೋ ಷೇರು ಮಾತ್ರ ಲಾಭ ಗಳಿಸಿದೆ.

 

error: Content is protected !!