ಅತ್ತಿಗೆ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಮೈದುನ!!

ಕಡಬ: ಆಸ್ತಿ ವಿಚಾರಕ್ಕೆ ಸಂಬಂಧಿಸಿ ತನ್ನ ಅತ್ತಿಗೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಬುಧವಾರ(ಮೇ 6) ಬೆಳಿಗ್ಗೆ ಕಡಬ ಠಾಣಾ ವ್ಯಾಪ್ತಿಯ ಐತ್ತೂರು ಎಂಬಲ್ಲಿ ಸಂಭವಿಸಿದೆ.

ಐತ್ತೂರು ನಿವಾಸಿ ಬೇಬಿ ಕೆ.ಎಸ್. ಎಂಬವರು ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಿದ್ದು, ತನ್ನ ಮನೆಯ ಸಮೀಪ ಬೋರ್ ವೆಲ್‌ನಲ್ಲಿ ನೀರು ಸಿಕ್ಕಿದ್ದರಿಂದ ಅಸೂಯೆಗೊಂಡ ತನ್ನ ಗಂಡನ ಸಹೋದರ ಕುಸುಮಾಧರ(37) ಎಂಬಾತ ತನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲೆತ್ನಿಸಿದ್ದು, ಈ ಸಂದರ್ಭ ತಾನು ಬೊಬ್ಬೆ ಹಾಕಿದಾಗ ಪೆಟ್ರೋಲ್ ಕ್ಯಾನ್ ಮತ್ತು ಬೆಂಕಿ ಪಟ್ಟಣವನ್ನು ಎಸೆದು ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.\

ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!