
ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಚರಂಡಿಗೆ ಬಿದ್ದ ಘಟನೆ ಇಂದು(ಮೇ.5) ಬೆಳಿಗ್ಗೆ ಬಂಟ್ವಾಳ ಸಮೀಪದ ಪೊಯ್ಲೊಡಿ ಎಂಬಲ್ಲಿ ನಡೆದಿದೆ.

ಘಟನೆಯಿಂದ ಚಿಕ್ಕಮಗಳೂರು ನಿವಾಸಿ ಲಕ್ಷಣ್ ಗೌಡ ಅವರು ಅಲ್ಪಸ್ವಲ್ಪ ಗಾಯಗಳಿಂದ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಲಕ್ಷಣ್ ಗೌಡ ಅವರು ಚಿಕ್ಕಮಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಪೋಲೀಸರು ತಿಳಿಸಿದ್ದಾರೆ.
