ಸುರತ್ಕಲ್: ತುಳುನಾಡಿನಲ್ಲಿ ನಾಗ, ಬ್ರಹ್ಮರ ಆರಾಧನೆಗೆ ಮಹತ್ವವಿದೆ. ಸುಮಾರು 1800 ವರ್ಷಗಳ ಹಿಂದೆ ಇದ್ದಂತಹ ಸುರತ್ಕಲ್,ಎಕ್ಕಾರು ಮತ್ತು ಕುತ್ತೆತ್ತೂರು ಎಂಬ ಪ್ರದೇಶವನ್ನು ಒಳಗೊಂಡ ಮೂರುನಾಡು ಬ್ರಹ್ಮಸ್ತಾನ ಇದೀಗ ಪುನರ್ ನಿರ್ಮಾಣಗೊಳ್ಳಲಿದೆ. ಶಿಲಾನ್ಯಾಸದ ಮೂಲಕ ಹಿಂದಿನ ವ್ಯೆಭವ ಮರುಕಳಿಸಲಿ ಎಂದು ಮೂಡುಬಿದಿರೆ ಜ್ಯೆನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಹೇಳಿದರು.

ಕುತ್ತೆತ್ತೂರಿನ ಮೂರುನಾಡು ಮಾಗಣೆಯಲ್ಲಿ ನಡೆದ ಬ್ರಹ್ಮಸ್ತಾನದ ಶಿಲಾನ್ಯಾಸ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಮಾತನಾಡಿದರು. ಸಭಾ ಕಾರ್ಯಕ್ರಮದ ಮೊದಲು ಮೂಡಿತ್ತಾಯ ಶ್ರೀ ಹಯವದನ ಭಟ್ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರಗಿತು.

ಸಭಾ ಕಾರ್ಯಕ್ರಮದಲ್ಲಿ ನೂತನ ಬ್ರಹ್ಮಸ್ತಾನದ ನಿಧಿ ಸಂಚಯನಕ್ಕೆ ಚಾಲನೆ ನೀಡಲಾಯಿತು.ಹಾಗೂ ಮುಷ್ತಿ ಕಾಣಿಕೆ ಸಮರ್ಪಣೆ ನಡೆಯಿತು. ಶ್ರೀ ಕ್ಷೇತ್ರ ಪೊನ್ನಗಿರಿಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ, ಗಡಿ ಪ್ರಧಾನರು, ಮಿತ್ತೋಡಿ ಅರಸುಮನೆ ಅಶೋಕ ಪೈವ ಹೆಗ್ಡೆ ಕುತ್ತೆತ್ತೂರು ಮಾತನಾಡಿ ಎಲ್ಲರ ಸಹಕಾರದಿಂದ ಮುಂದಿನ 6 ತಿಂಗಳ ಒಳಗೆ ಸಂಪೂರ್ಣ ಜೀರ್ಣೋದ್ದಾರ ಕಾರ್ಯ ಸಂಪೂರ್ಣಗೊಳ್ಳಲಿದೆಯೆಂದು ತಿಳಿಸಿದರು.

ಶ್ರೀ ಕ್ಷೇತ್ರ ಪೊನ್ನಗಿರಿಯ ತಂತ್ರಿಗಳಾದ ವಿಜಯದಾಸ ಆಚಾರ್ಯ,ಮೂಡಿತ್ತಾಯ ಶ್ರೀ ಹಯವದನ ಭಟ್, ಶ್ರೀ ಕೃಷ್ಣರಾಜ ತಂತ್ರಿ, ಕುಡುಪು,ಶ್ರೀ ವಾಸುದೇವ ಆಚಾರ್ಯ, ಮೂಡುಮಠ ಶಿಬರೂರು,ಉಮೇಶ್ ಶೆಟ್ಟಿ ಶಿಬರೂರು ಗುತ್ತಿನಾರ್,ಪ್ರತಾಪ್ ಶೆಟ್ಟಿ ಕಲ್ಲಂಜಬಾಳಿಕೆ, ಮನೋಹರ್ ಶೆಟ್ಟಿ ಬೊಳ್ಳರ ಗುತ್ತು, ಪುಳಿತ್ತೂರ್ ವಿಶ್ವನಾಥ್ ಭಂಡಾರಿ, ಕೃಷ್ಣಯ್ಯ,ನಾಗೇಶ್ ಶೆಟ್ಟಿ ಕಲ್ಲೋಳಿ, ಪ್ರಕಾಶ್ ಕೊಡಪ, ಕರುಣಾಕರ ಶೆಟ್ಟಿ ಆಡಿಮಾರು ಗುತ್ತು, ಆನಂದ ಶೆಟ್ಟಿ ನಾಯರ್ ಕೋಡಿ,ವಿಶ್ವನ್ನಾಥ ಪೂಜಾರಿ ಹೊಯ್ಗೆ ಮನೆ, ನಿತಿನ್ ಶೆಟ್ಟಿ, ಸುದರ್ಶನ್ ಅಮೀನ್ .ಜೀರ್ಣೋದ್ದಾರ ಸಮಿತಿಯ ಕಾರ್ಯಧ್ಯಕ್ಷ ಸೀತಾರಾಮ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಬ್ರಹ್ಮಸ್ತಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸಂತೋಷ ಶೆಟ್ಟಿ ಸ್ವಾಗತಿಸಿದರು, ಕಾರ್ಯದರ್ಶಿ ಜಯಪ್ರಕಾಶ್ ಸೂರಿಂಜೆ ಪ್ರಸ್ತಾವನೆಗ್ಯೆದರು, ವೀರೇಂದ್ರ ಶೆಟ್ಟಿ ಕುರಿಮಾರ್ ವಂದಿಸಿದರು, ಸತೀಶ್ ಶೆಟ್ಟಿ ನಿರೂಪಿಸಿದರು.