ಪತ್ನಿಯ ಅನೈತಿಕ ಸಂಬಂಧದಿಂದ ನೊಂದ ಗಂಡ ಆತ್ಮಹತ್ಯೆ!

ಕಾರವಾರ: ಪತ್ನಿಯ ಅನೈತಿಕ ಸಂಬಂಧದಿಂದ ನೊಂದ ಯುವಕ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ದಾಂಡೇಲಿ ನಗರದಲ್ಲಿ ನಡೆದಿದೆ. ಮೃತನನ್ನು ರಾಘವೇಂದ್ರ ವಾಡಕರ್ ಎಂದು ಗುರುತಿಸಲಾಗಿದೆ.
ಮೂರು ವರ್ಷಗಳಿಂದ ಮಲೇಷಿಯಾದಲ್ಲಿ ದುಡಿಯುತ್ತಿದ್ದ ರಾಘವೇಂದ್ರ ವಾರದ ಹಿಂದೆ ದಾಂಡೇಲಿಗೆ ಮರಳಿದ್ದು ಈ ವೇಳೆ ಪತ್ನಿ ಇಬ್ಬರು ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದಳು ಮಾತ್ರವಲ್ಲ ನಿನ್ನೊಂದಿಗೆ ಸಂಸಾರ ಮಾಡಲ್ಲ ಎಂದು ಹೇಳಿದ್ದಳು.


ಇಷ್ಟೇ ಅಲ್ಲದೆ ರಾಘವೇಂದ್ರ ಮೊಬೈಲ್‌ ಗೆ ಬೇರೆ ಬೇರೆ ಯುವಕರ ಜೊತೆ ಇರುವ ಫೋಟೋಗಳನ್ನ ಕಳಿಸುವುದು, ಅದನ್ನೇ ವಾಟ್ಸಾಪ್‍ ಸ್ಟೇಟಸ್ ಹಾಕಿ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎನ್ನಲಾಗಿದೆ. ತಾನು ಬೇರೆ ಯುವಕರ ಜೊತೆ ಸಂಬಂಧ ಇಟ್ಟುಕೊಂಡಿರುವ ಬಗ್ಗೆಯೂ ಗಂಡನ ಬಳಿ ಹೇಳಿದ್ದಳು. ಪತ್ನಿಗೆ ಅನೈತಿಕ ಸಂಬಂಧ ಬಿಡುವಂತೆ ಬುದ್ಧಿವಾದ ಹೇಳಿದ್ದ ರಾಘವೇಂದ್ರ ತನ್ನ ಕೈ ಕೊಯ್ದುಕೊಂಡು ಅದರ ಫೊಟೋವನ್ನು ವಾಟ್ಸ್ ಅಪ್ ಮಾಡಿದ್ದ. ಆದರೂ ಮನಸು ಕರಗದ ಪತ್ನಿ ಸಾಯುವುದಾದರೆ ಸತ್ತುಹೋಗು ಎಂದಿದ್ದು ಇದರಿಂದ ಮನನೊಂದು ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!