ಸುರತ್ಕಲ್: ಇಲ್ಲಿನ ಕೊಡಿಪಾಡಿ ಶ್ರೀ ಕ್ಷೇತ್ರ ಬ್ರಹ್ಮಸ್ಥಾನ ಗರೋಡಿಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಕಾಲಾವಧಿ ಗರೋಡಿ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮ ಮಂಗಳವಾರ ದೈವಸ್ಥಾನದ ವಠಾರದಲ್ಲಿ ಜರುಗಿತು.


ಸಮಾರಂಭದಲ್ಲಿ ಆಶೀರ್ವಚನ ನೀಡಿದ ಒಡಿಯೂರು ಶ್ರೀಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ಸಂಸ್ಕಾರ ಸಂಸ್ಕೃತಿಯ ಒಡಲು, ನಗುವೇ ತುಳುವರ ಗುರುತು. ಇಂದಿನ ಈ ಧಾರ್ಮಿಕ ಸಭೆಯು ಭವ್ಯ ಭಾರತಕ್ಕೆ ಭವಿಷ್ಯವಿದೆ ಎಂಬುದನ್ನು ಸಾರಿ ಹೇಳುತ್ತಿದೆ. ಬ್ರಹ್ಮಕಲಶೋತ್ಸವದಲ್ಲಿ ಇನಾಯತ್ ಅಲಿ ಜವಾಬ್ದಾರಿಹೊತ್ತುಕೊಂಡು ನಿಭಾಯಿಸುತ್ತಿರುವುದ ಕಂಡರೆ, ಧರ್ಮದ ಸಾರವೇ ಸಾಮರಸ್ಯ ಎಂಬುದು ಸ್ಪಷ್ಟವಾಗುತ್ತದೆ. ಎಲ್ಲರೂ ತಮ್ಮ ಬದುಕಿನಲ್ಲಿ ದೈವಿಕತೆಯನ್ನು ಉಳಿಸಿಕೊಳ್ಳುವ ಕೆಲಸವಾಗಬೇಕು ಎಂದರು.
ಸಂಪತ್ತು ಮತ್ತು ಯವ್ವನವನ್ನು ಸೂಕ್ತ ಸಮಯಕ್ಕೆ ಸರಿಯಾದ ರೀತಿಯಲ್ಲಿ ವಿನಿಯೋಗಸಬೇಕು ಎಂದು ಸ್ವಾಮೀಜಿ ರಾಜಕೀಯದಲ್ಲಿ ಧರ್ಮಬೇಕು, ಆದರೆ ಧರ್ಮದಲ್ಲಿ ರಾಜಕೀಯ ಸಲ್ಲದು. ಬದಕಿನಲ್ಲಿ ಮಮಂತನವಾದರೆ ಮಾತ್ರ ಸಮಾಜದಲ್ಲಿ ಮಾನವೀಯತೆ ಬೆಳೆದು ಬರುತ್ತದೆ ಎಂದು ಅವರು ಅಭಿಪ್ರಾಯಿಸಿದರು.

ನಿಡ್ಡೋಡಿ ಪಾತ್ರೆಬೈಲು ಗುತ್ತು ಕಡೆಂಜ ಅಶೋಕ್ ಕುಮಾರ್ ಚೌಟ ಅವರು ಧಾರ್ಮಿಕ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೊಡಿಪಾಡಿ ಬಾಳಿಕೆ ಯುಜಮಾನರು ಹಾಗೂ ಗಡಿಪ್ರಧಾನರಾದ ಜಗನ್ನಾಥ ಅತ್ತಾರ್ ಪ್ರಾಸ್ತಾವಿಕ ಮಾತನಾಡಿದರು.

ಸಮಾರಂಭದಲ್ಲಿ ಮಂಗಳುರು ಮನಪಾ ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮಿಜಾರು ಗುತ್ತು, ಕರುಣಾಕರ ಶೆಟ್ಟಿ ಪಣಿಯೂರು ಗುತ್ತು, ಹೆಜಮಾಡಿ ಶ್ರೀಬ್ರಹ್ಮಬೈದರ್ಕಳ ಗರೋಡಿಯ ಅಧ್ಯಕ್ಷ ಮೋಹನದಾಸ್ ಹೆಜಮಾಡಿ, ಕೆಪಿಸಿಸಿ ಸದಸ್ಯ ಆರ್. ಕೆ. ಪ್ರಥ್ವಿರಾಜ್, ರಮಾನಾಥ ರೈ, ಕೆ.ಕೆ. ಕಂಸ್ಟ್ರಕ್ಷನ್‌ನ ಕಿರಣ ಕುಮಾರ್ ಶೆಟ್ಟಿ, ಉದ್ಯಮಿ ಹರೀಶ್ ಮುಂಚೂರು, ಯಾದವ ಕೋಟ್ಯಾನ್ ಪೆರ್ಮುದೆ, ನಿಕಟಪೂರ್ವ ಮನಪಾ ಸದಸ್ಯೆ ಶ್ವೇತಾ ಪೂಜಾರಿ, ಕೊಡಿಪಾಡಿ ಶ್ರೀ ಕೊಡಮಣಿತ್ತಾ ಶ್ರೀ ಬ್ರಹ್ಮಬೈದರ್ಕಳಸೇವಾ ಸಮಿತಿ ಕ್ಷೇತ್ರಾಡಳಿತ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರೂಪೇಶ್ ರೈ ಕೊಯ್ಕುಡೆ ಬಾಳಿಕೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಕುದ್ರೋಳಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಇನಾಯತ್ ಅಲಿ, ಕ್ಷೇತ್ರಾಡಳಿತ ಹಾಗೂ ಜೀರ್ಣೋದ್ಧಾರ ಸಮಿರಿಯ ಗೌರವಾಧ್ಯಕ್ಷ ಭುಜಂಗ ಶೆಟ್ಟಿ, ಉಪಾದುಕ್ಷ ಕಾರ್ತಿಕ್ ಶೆಟ್ಟಿ ಕೊಡೊಪಾಡಿ, ಸಂಚಾಲಕ ಸುರೇಂದ್ರ ಶೆಟ್ಟಿ ಕೊಡಿಪಾಡಿ ಬಾಳಿಕೆ, ಪ್ರಧಾನ ಕಾರ್ಯದರ್ಶಿ ಅಭಿಲಾಷ್ ಚೌಟ ಕೊಡಿಪಾಡಿ ಬಾಳಿಕೆ, ಕಾರ್ಯದರ್ಶಿ ರತನ್ ಶೆಟ್ಟಿ ಸಿಪಾಯಿ ಮನೆ ಪಡುಬಿದ್ರೆ, ಕೋಶಾಧಿಕಾರಿ ರಮೇಶ ಶೆಟ್ಟಿ ಕೊಡಿಪಾಡಿ ಬಾಳಿಕೆ ಮೊದಲಾದವರು ಉಪಸ್ಥಿತರಿದ್ದರು.

ಸಂಜೆ 3ಗಂಟೆಗೆ ಬೃಹತ್ ಶೋಭಾಯಾತ್ರೆಯ ಮೂಲಕ ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಿಂದ ಶ್ರೀ ಕ್ಷೇತ್ರ ಬ್ರಹ್ಮಸ್ಥಾನ ಗರೋಡಿ ಕೊಡಿಪಾಡಿಗೆ ಹಸಿರು ಹೊರೆಕಾಣಿಕೆ ತರಲಾಯಿತು. ಸಂಜೆ 6ಗಂಟಗೆ ಆಚಾರ್ಯಾದಿ ಋತಗ್ವರಣ, ಸಪ್ತ ಶುದ್ಧಿ ವಾಸ್ತು ಹೋಮ, ವಾಸ್ತುಪೂಜೆ ವಾಸ್ತು ಬಲಿ, ರಾಕ್ಷೋಘ್ನಹೋಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಮಂಜೇಶ್ವರ ಶಾರದಾ ಆಟ್ಸ್ ಕಲಾವಿದರಿಂದ “ಒಂತೆ ಲೇಟಾಂಡ್..ಆಂಡಲ!” ತುಳು ಹಾಸ್ಯ ನಾಟಕ ನಡೆಯಿತು.