
ಮಂಗಳೂರು: ಮೇ 30 ಶನಿವಾರದಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿರುವ ಪಟ್ಲ ಸಂಭ್ರಮ 2026 ಸಮಾರಂಭದಲ್ಲಿ ಎಸ್ ಎಸ್ ಎಲ್ ಸಿ (SSLC) ಮತ್ತು ಪಿಯುಸಿ ( 2nd PUC) ವಿಭಾಗದಲ್ಲಿ ಶೇಕಡ 90ಕ್ಕಿಂತ ಮೇಲ್ಪಟ್ಟು ಅಂಕಗಳಿಸಿದ ಬಿ ಪಿ ಎಲ್ ಕಾರ್ಡ್ ಹೊಂದಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ವತಿಯಿಂದ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು. ಈ ಯೋಜನೆಯ ಫಲಾನುಭವಿಗಳು ತಮ್ಮ ಭಾವಚಿತ್ರ, ಬಿಪಿಎಲ್ ಕಾರ್ಡ್ ಪ್ರತಿ ಹಾಗೂ ಆಯಾಯ ಶಾಲೆಯ ದೃಡೀಕೃತ ಅಂಕಪಟ್ಟಿಯೊಂದಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ದಿನಾಂಕ 15 -05 -2026. ವಿದ್ಯಾರ್ಥಿ ವೇತನವನ್ನು ಸ್ವೀಕರಿಸುವ ವಿದ್ಯಾರ್ಥಿಗಳು ಸಮಾರಂಭದಂದು (30-05-2026) ಬೆಳಿಗ್ಗೆ ಗಂಟೆ 9 ಕ್ಕೆ ಸರಿಯಾಗಿ ಕಡ್ಡಾಯವಾಗಿ ಹಾಜರಿರಬೇಕು.
ವಿದ್ಯಾರ್ಥಿಗಳು ಸ್ವಯಂ ಬಾರದೇ ಇದ್ದಲ್ಲಿ ಆ ಅರ್ಜಿಯನ್ನು ಮಾನ್ಯ ಮಾಡಲಾಗುವುದಿಲ್ಲ. ದಾಖಲೆಗಳೊಂದಿಗೆ ಅರ್ಜಿಗಳನ್ನು ಕಳುಹಿಸಬೇಕಾದ ವಿಳಾಸ:
ಶಾಪ್ ನಂ. 16. ಮತ್ರು 17
ಸಿಎ ಸುದೇಶ್ ಕುಮಾರ್ ರೈ
ಎರಡನೇ ಮಹಡಿ
ಎಂಪೈರ್ ಮಾಲ್
ಎಂ ಜಿ ರಸ್ತೆ, ಮಂಗಳೂರು 575003
ಸಂಪರ್ಕ ಸಂಖ್ಯೆ 9448623375
❇️❇️❇️❇️❇️❇️❇️❇️❇️❇️❇️❇️❇️❇️❇️❇️
ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ⬇️
https://whatsapp.com/channel/0029VbCtDh90G0Xk1MnlGr41
