ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ; ಹಿರಿಯ ನಟ ಪ್ರಕಾಶ್‌ ರಾಜ್‌ ವಿರುದ್ಧ ದೂರು

ಬೆಂಗಳೂರು: ಹಿರಿಯ ನಟ ಪ್ರಕಾಶ್‌ ರಾಜ್‌ ಅವರು ʼರಾಮಾಯಣʼದ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ, ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಅವರ ವಿರುದ್ಧ ಬಿಜೆಪಿ ನಾಯಕ ಹಾಗೂ ಟಿಟಿಡಿ ಮಂಡಳಿಯ ಸದಸ್ಯರಾದ ಭಾನು ಪ್ರಕಾಶ್ ಅವರು ದೂರು ದಾಖಲಿಸಿದ್ದಾರೆ.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಜನವರಿಯಲ್ಲಿ ನಡೆದ ಕೇರಳ ಸಾಹಿತ್ಯ ಉತ್ಸವದಲ್ಲಿ ನಡೆದ ಸಂವಾದವೊಂದರಲ್ಲಿ ಪ್ರಕಾಶ್ ರೈ ಅವರು ಮಕ್ಕಳ ನಾಟಕವೊಂದರ ಉದಾಹರಣೆ ನೀಡುತ್ತಾ ರಾಮಾಯಣದ ಘಟನೆಯೊಂದನ್ನು ವಿವರಿಸಿದ್ದರು. ರಾಮ ಉತ್ತರ ಭಾರತದವನು ಹಾಗೂ ರಾವಣ ದಕ್ಷಿಣ ಭಾರತದ ಆದಿವಾಸಿ. ರಾಮ ಹಣ್ಣನ್ನು ಕಿತ್ತು ತಿಂದಿದ್ದರಿಂದ ಇಬ್ಬರ ಮಧ್ಯೆ ಕಿತ್ತಾಟ ಶುರುವಾಯಿತು. ಶೂರ್ಪಣಖಿಯು ಹಣ್ಣು ತಿನ್ನುತ್ತಿದ್ದ ರಾಮ-ಲಕ್ಷ್ಮಣರನ್ನು ಪ್ರಶ್ನಿಸುತ್ತಾಳೆ. ಆಗ ರಾವಣನು ಬಂದು “ಅವರು ಹಸಿದಿದ್ದಾರೆ, ಹಣ್ಣು ತಿನ್ನಲಿ ಬಿಡು” ಎನ್ನುತ್ತಾನೆ. ಈ ಕಥೆಗೆ ಆಧುನಿಕ ಸ್ಪರ್ಶ ನೀಡಿದ್ದ ಪ್ರಕಾಶ್ ರೈ, “ರಾಮನು ಹಣ್ಣಿಗೆ ಹಣ ಕೊಡಲು ಮುಂದಾದಾಗ, ಅದಕ್ಕೆ ಜಿಎಸ್‌ಟಿ ಸೇರಿಸಿ ದೊಡ್ಡ ಮೊತ್ತದ ಬಿಲ್ ನೀಡಲಾಗುತ್ತದೆ. ಹಣ ನೀಡಲು ಸಾಧ್ಯವಾಗದಿದ್ದಾಗ, ರಾವಣನು ಹಣ್ಣು ತಿನ್ನುವ ಬದಲು ಬೀಜ ಬಿತ್ತಿ ಗಿಡ ಬೆಳೆಸುವಂತೆ ಸಲಹೆ ನೀಡುತ್ತಾನೆ” ಎಂದು ವ್ಯಂಗ್ಯವಾಗಿ ಹೇಳಿದ್ದರು.

ಬಿಜೆಪಿ ನಾಯಕ ಭಾನು ಪ್ರಕಾಶ್ ಮಾತ್ರವಲ್ಲದೆ, ಏಪ್ರಿಲ್ 16 ರಂದು ವಕೀಲೆ ಅಮಿತಾ ಸಚದೇವ ಎಂಬುವವರು ಕೂಡ ಪ್ರಕಾಶ್ ರೈ ವಿರುದ್ಧ ದೂರು ನೀಡಿದ್ದಾರೆ. ಸನಾತನ ಧರ್ಮ ಮತ್ತು ಹಿಂದೂ ದೇವತೆಗಳಿಗೆ ಅವಮಾನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಗೆ ಪ್ರಚೋದನೆ ನೀಡಿದವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

error: Content is protected !!