ಮಂಗಳೂರು: ಗೋವಿಂದಾಸ್ ಪ್ರೀಮಿಯರ್ ಲೀಗ್ ಕ್ತಿಕೆಟ್ ಪಂದ್ಯಾಟಕ್ಕೆ ಇತ್ತೀಚಿಗೆ ಗೋವಿಂದಾಸ್ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ ಪುಂಡಲೀಕ್ ಹೊಸಬೆಟ್ಟು ಇವರು ದೀಪಬೆಳಗಿಸುವ ಮೂಲಕ ವಿದ್ಯುಕ್ತ ವಾಗಿ ಚಾಲನೆ ನೀಡಿದರು.

ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರಿಕೆಟ್ ಆಟಗಾರರು ಸಾಧನೆಮಾಡಲು ಏಕಾಗ್ರತೆ, ಸತತ ಪ್ರಯತ್ನ, ಧ್ರಡ ವಿಶ್ವಾಸ ವಿದ್ದರೆ ರಾಜ್ಯವಲ್ಲದೆ ರಾಷ್ಟ್ರಮಟ್ಟದಲ್ಲೂ ತಮ್ಮ ಪ್ರತಿಭೆ ಯಿಂದ ಮಿಂಚಬಹುದು ಎಂದು ಕ್ರೀಡಾಪಟುಗಳಿಗೆ ಸ್ಫೂರ್ತಿಯ ಮಾತನ್ನು ತಿಳಿಸಿದರು.

ಕ್ರಿಡಾ ಮನೋಭಾವದಿಂದ ಸಚಿನ್, ವಿರಾಟ್ ಕೊಯ್ಲಿ, 15 ರ ಹರೆಯದ ಆಟಗಾರ ವೈಭವ್ ಸೂರ್ಯವಂಶಿ ಈಗಾಗಲೇ ಜಗತ್ತೇ ಬೆರಗಾಗುವಂತೆ ತಮ್ಮ ಪ್ರತಿಭೆಯನ್ನು ತೋರಿಸಿರುತ್ತಾರೆ. ಹಾಗೆಯೇ ನಿಮಗೆ ಮಹಾನ್ ಕ್ರೀಡಾಪಾಟುಗಳು ಸ್ಫೂರ್ತಿಯಾಗಿ ಭವಿಷ್ಯದಲ್ಲಿ ನೀವು ರಾಷ್ಟ್ರ ಮಟ್ಟದಲ್ಲಿ ಮಿಂಚಿ, ಗೋವಿಂದಾಸ್ ಕಾಲೇಜಿನ ಕೀರ್ತಿಯನ್ನು ಬೆಳಗಿಸಿ ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.

ಅಧ್ಯಕ್ಷತೆಯನ್ನು ಪ್ರಾಂಶುಪಾಲ ಹರೀಶ್ ಆಚಾರ್ಯ ವಸಿದ್ದರು, ಆಡಳಿತ ನಿರ್ದೇಶಕ ರಮೇಶ್ ಭಟ್ ಎಸ್. ಜಿ, ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಸರೋಜ ತಾರಾನಾಥ್ ಶೆಟ್ಟಿ, ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ನೀಲಪ್ಪ ವಿ, ಮತ್ತು ಸುರತ್ಕಲ್ ಮಾತೃಶ್ರೀ ಕಂಪ್ಯೂಟರ್ಸ್‌ನ ಶ್ರೀಮತಿ ಲಕ್ಷ್ಮಿ ಹೇಮನಾಥ್ ಮೆಂಡನ್, ಕ್ರೀಡಾ ಕಾರ್ಯದರ್ಶಿ ವಿ ಕೆ ಸ್ವಸ್ತಿಕ್, ದೈಹಿಕ ಶಿಕ್ಷಕ ಪ್ರಶಾಂತ್ ಎಂ ಡಿ, ಗಗನ್ ಪುತ್ರನ್, ಶಿಕ್ಷಕ ವೃoದ, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಸುಪ್ರೀತ್ ನಿರ್ವಹಿಸಿದ್ದರು.
