ಕಪಾಟಿನಲ್ಲಿದ್ದ ಗಂಡನ ಬ್ಯಾಂಕ್‌ ಲಾಕರ್‌ ಕೀ ಕದ್ದು ಚಿನ್ನ ಎಗರಿಸಿದ ಪತ್ನಿ!!

ಉಡುಪಿ: ಒಂದೇ ಮನೆಯಲ್ಲಿ ವಾಸಿಸುತ್ತಿದ್ದ ಗಂಡ ಹೆಂಡತಿ ನಡುವೆ ಇದೀಗ ಕಳ್ಳತನ ಪ್ರಕರಣ ನಡೆದಿದ್ದು, ಪತ್ನಿ ವಿರುದ್ದ ಪತಿ ಮನೆಯ ಕಪಾಟಿನಲ್ಲಿದ್ದ ಬ್ಯಾಂಕ್‌ ಲಾಕರ್‌ ಕೀ ಕದ್ದು ಚಿನ್ನ ಪಡೆದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಉಚ್ಚಿಲದ ಕಿರಣ್‌ ಕುಮಾರ್‌ ಎಂಬವರು ಪತ್ನಿ ವನಿತಾ ವಿರುದ್ದ ಆರೋಪ ಮಾಡಿದ್ದಾರೆ.

ಎಲೆಕ್ಟ್ರಿಕಲ್‌ ಇಂಜಿನಿಯರ್‌ ಆಗಿ ಕೆಲಸ ಮಾಡುವ ಕಿರಣ್ ಕುಮಾರ್ ಅವರು ವನಿತಾ ಎಂಬುವವರೊಂದಿಗೆ 2016 ನೇ ಸಾಲಿನಲ್ಲಿ ಮದುವೆಯಾಗಿದ್ದು, ದಾಂಪತ್ಯ ಜೀವನದಲ್ಲಿ ವೈಮನಸ್ಸು ಉಂಟಾಗಿ ಪ್ರಸ್ತುತ ಒಂದೇ ಮನೆಯಲ್ಲಿ ಬೇರೆ-ಬೇರೆಯಾಗಿ ಜೀವನ ಸಾಗಿಸುತ್ತಿದ್ದಾರೆ. ಕಿರಣ್‌ ಅವರಿಗೆ ಸಂಬಂಧಪಟ್ಟ ದಾಖಲಾತಿಗಳು ಹಾಗೂ ಉಡುಪಿ ಶಾಖೆಯ ಐಡಿಬಿಐ ಬ್ಯಾಂಕ್‌ ಲಾಕರ್‌ ಕೀಯನ್ನು ಮನೆಯ ಅಲ್ಮಾರಿನಲ್ಲಿ ಇಟ್ಟಿದ್ದರು. ಏಪ್ರಿಲ್‌ 10ರಂದು ಕಿರಣ್ ಕೆಲಸಕ್ಕೆ ಹೋಗಿದ್ದಾಗ ವನಿತಾ ಅವರು ಕೀ ಮೇಕರ್‌ ರವರ ಸಹಾಯದಿಂದ ಅಲ್ಮಾರಿ ಒಡೆದು ಅದರೊಳಗಿದ್ದ ಬ್ಯಾಂಕ್‌ ಲಾಕರ್‌ ಕೀ ಯನ್ನು ಕಳವು ಮಾಡಿ ಬ್ಯಾಂಕ್‌ ಶಾಖೆಯಿಂದ 23,67,690 ರೂ ಮೌಲ್ಯದ 169 ಗ್ರಾಂ ಚಿನ್ನ ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 52/2026, ಕಲಂ: 331(3) 305 BNS ರಂತೆ ಪ್ರಕರಣ ದಾಖಲಾಗಿದೆ.

error: Content is protected !!