ಜಿಲ್ಲೆಯಲ್ಲಿ ಡಿಜಿಟಲ್ ಜನಗಣತಿ ಪ್ರಕ್ರಿಯೆ ಆರಂಭ: ಸ್ವಯಂ ಮನೆ ಪಟ್ಟಿ ಪೂರ್ಣಗೊಳಿಸಲು ಡಿಸಿ ಕರೆ

ಮಂಗಳೂರು: ಭಾರತದ ಮೊದಲ ಡಿಜಿಟಲ್ ಜನಗಣತಿಯ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಗಣತಿ ದತ್ತಾಂಶ ಸಂಗ್ರಹಿಸುವ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ(ಡಿಸಿ) ದರ್ಶನ್ ಎಚ್.ವಿ. ತಿಳಿಸಿದ್ದಾರೆ. ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಯ ಪರವಾಗಿ ಜನಗಣತಿ ಕಾಯ್ದೆ 1948ರ ಅನ್ವಯ ಈ ಕಾರ್ಯ ನಡೆಯುತ್ತಿದೆ.

ನಿಮ್ಮ ಎಲ್ಲಾ ರೀತಿಯ ಡಾಕ್ಯುಮೆಂಟೇಶನ್ ಮತ್ತು ಲೀಗಲ್ ಸರ್ವಿಸ್‌ ಅಗತ್ಯತೆಗಾಗಿ ಈಗಲೇ ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಗ್ರೂಪ್ ಸೇರಿಕೊಳ್ಳಿ.

ಸಾರ್ವಜನಿಕರಿಗೆ ಸ್ವಯಂ ಮನೆ ಪಟ್ಟಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶ ನೀಡಲಾಗಿದೆ. ಕಾಯ್ದೆಯ ಪ್ರಕಾರ, ಹೆಸರು ಮತ್ತು ಗುರುತು ಸೇರಿದಂತೆ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. ಈ ಮಾಹಿತಿಯನ್ನು ಯಾವುದೇ ತೆರಿಗೆ ಅಥವಾ ತನಿಖಾ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ ಮತ್ತು ಡೇಟಾವನ್ನು ಸುರಕ್ಷಿತವಾಗಿ ನಿರ್ವಹಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಏಪ್ರಿಲ್ 1 ರಿಂದ 15 ರವರೆಗೆ ನಾಗರಿಕರು ಆನ್‌ಲೈನ್ ಮೂಲಕ ಸ್ವಯಂ ಮನೆ ಪಟ್ಟಿಯನ್ನು ಪೂರ್ಣಗೊಳಿಸಬಹುದು. ಈ ಪ್ರಕ್ರಿಯೆಯು ಕೇವಲ 15-20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಪ್ರಕ್ರಿಯೆ ಮುಗಿದ ನಂತರ “ವಿಶಿಷ್ಟ ಸ್ವಯಂ-ಗಣತಿ ಗುರುತಿನ ಸಂಖ್ಯೆ”(SE ID) ಜೆನರೇಟ್ ಆಗುತ್ತದೆ. ಈ ಐಡಿಯನ್ನು ಗಣತಿದಾರರು ಮನೆಗೆ ಭೇಟಿ ನೀಡಿದಾಗ ಅವರಿಗೆ ನೀಡುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 57,466 ಮನೆಗಳನ್ನು ಸ್ವಯಂ ಮನೆ ಪಟ್ಟಿ ಪ್ರಕ್ರಿಯೆಯಡಿ ದಾಖಲಿಸಲಾಗಿದ್ದು, ಜಿಲ್ಲೆಯಾದ್ಯಂತ ಈ ಕಾರ್ಯ ಮುಂದುವರಿಯುತ್ತಿದೆ.

ಅಧಿಕೃತ ವೆಬ್‌ಸೈಟ್ https://se.census.gov.in/ ಗೆ ಭೇಟಿ ನೀಡಿ, ಮೊಬೈಲ್ ಸಂಖ್ಯೆಗೆ ಬರುವ OTP ಬಳಸಿ ಲಾಗಿನ್ ಆಗಿ, ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ವಿವರಗಳನ್ನು ಆಯ್ಕೆ ಮಾಡಿ, ಡಿಜಿಟಲ್ ನಕ್ಷೆಯಲ್ಲಿ ನಿಮ್ಮ ಮನೆಯ ಸ್ಥಳವನ್ನು ಗುರುತಿಸಿ, ಕುಟುಂಬ ಮತ್ತು ಮನೆಗೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಿ, ಸಲ್ಲಿಕೆಯಾದ ನಂತರ ಸಿಗುವ SE ID ಅನ್ನು ಗಣತಿದಾರರು ಮನೆಗೆ ಬಂದಾಗ ಪರಿಶೀಲನೆಗಾಗಿ ಅವರಿಗೆ ನೀಡಬೇಕು. ಜಿಲ್ಲೆಯ ಎಲ್ಲಾ ನಿವಾಸಿಗಳು ಈ ಕೂಡಲೇ ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ಮನೆ ಪಟ್ಟಿಯನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

error: Content is protected !!