
ಮಂಗಳೂರು: ಕೆನರಾ ಎಂಜಿನಿಯರಿಂಗ್ ಕಾಲೇಜಿನ ಕೆನರಾ ಇನೋವೇಶನ್ ಫೌಂಡೇಶನ್ (CIF) ವತಿಯಿಂದ ರೂಪುಗೊಂಡ ಎರಡು ವಿದ್ಯಾರ್ಥಿ ಸ್ಟಾರ್ಟ್‌ಅಪ್ ತಂಡಗಳು ಪ್ರತಿಷ್ಠಿತ “ಇನೋವೇಶನ್, ಡಿಸೈನ್ ಅಂಡ್ ಎಂಟರ್‌ಪ್ರಿನ್ಯುರ್‌ಶಿಪ್ (IDE) ಬೂಟ್‌ಕ್ಯಾಂಪ್ – ಆವೃತ್ತಿ 3, ಹಂತ 1”ರಲ್ಲಿ ಯಶಸ್ವಿಯಾಗಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿವೆ.

ಕೇಂದ್ರ ಶಿಕ್ಷಣ ಸಚಿವಾಲಯದ ಆಶ್ರಯದಲ್ಲಿ AICTE, ವಾಧ್ವಾನಿ ಫೌಂಡೇಶನ್ ಹಾಗೂ SBI ಫೌಂಡೇಶನ್ ಸಹಯೋಗದಲ್ಲಿ ಶಿವಮೊಗ್ಗದ ಜವಾಹರಲಾಲ್ ನೆಹರು ನ್ಯೂ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ನಡೆದ ಈ ಬೂಟ್‌ಕ್ಯಾಂಪ್‌ನಲ್ಲಿ ದೇಶದ ವಿವಿಧ ಭಾಗಗಳಿಂದ 2,981 ವಿದ್ಯಾರ್ಥಿ ಉದ್ಯಮಿಗಳು ಭಾಗವಹಿಸಿದ್ದರು.
“ಲೈಫ್ ಲಿಂಕ್” ಸ್ಟಾರ್ಟ್‌ಅಪ್‌ಗೆ ಕೆನರಾ ಇನೋವೇಶನ್ ಫೌಂಡೇಶನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಪ್ರಶಾಂತ್ ಕುಮಾರ್ ಎ. ಮಾರ್ಗದರ್ಶನ ನೀಡಿದ್ದು, ತಂಡವನ್ನು ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಅಭಿನವ್ ಆರ್ ನೇತೃತ್ವದಲ್ಲಿ ಧನುಷ್ ಪೈ ಜೊತೆಗೂಡಿ ಮುನ್ನಡೆಸಿದರು.

ಇನ್ನೊಂದೆಡೆ, “ಸೀ ಟು ಸರ್ವ್” ಸ್ಟಾರ್ಟ್‌ಅಪ್‌ಗೆ ಎಂಟರ್‌ಪ್ರಿನ್ಯುರ್‌ಶಿಪ್ ಡೆವಲಪ್ಮೆಂಟ್ ಸೆಲ್‌ನ ಶ್ರೀ ಎಂ. ಎಚ್. ಸೂರಜ್‌ಪ್ರಸಾದ್ ಮಾರ್ಗದರ್ಶನ ನೀಡಿದ್ದು, ತಂಡವನ್ನು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿ ಕ್ಷಿತಿಜ್ ಡಿ ಕಟೀಲ್ ನೇತೃತ್ವದಲ್ಲಿ ಅವಿಲಾಶ್ ಹೆಚ್ ನಾಯಕ್, ಚಿರಾಗ್, ಸುದೀಕ್ಷ್ ಎಸ್.ಕೆ. ಹಾಗೂ ಶ್ರವಣ್ ಟಿ ಸದಸ್ಯರಾಗಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳ ಸಿದ್ಧತೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಡೀನ್ ಡಾ. ಉದಯ ಕುಮಾರ್ ಕೆ ಶೆಣೈ ಪ್ರಮುಖ ಪಾತ್ರವಹಿಸಿದ್ದರು. ಈ ಬೂಟ್‌ಕ್ಯಾಂಪ್‌ನಲ್ಲಿ ವಿದ್ಯಾರ್ಥಿಗಳು ಡಿಸೈನ್ ಥಿಂಕಿಂಗ್, ಸ್ಟಾರ್ಟ್‌ಅಪ್ ಅಭಿವೃದ್ಧಿ ಹಾಗೂ ವ್ಯವಹಾರ ಮಾದರಿ ರೂಪಿಸುವಿಕೆ ಕುರಿತು ಪ್ರಾಯೋಗಿಕ ಅನುಭವ ಪಡೆದಿದ್ದಾರೆ.
ಕೆನರಾ ಹೈ ಸ್ಕೂಲ್ ಅಸೋಸಿಯೇಷನ್‌ನ ಬೆಂಬಲದಿಂದ ವಿದ್ಯಾರ್ಥಿ ಸ್ಟಾರ್ಟ್‌ಅಪ್‌ಗಳು ರಾಷ್ಟ್ರಮಟ್ಟದ ವೇದಿಕೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಕಾಶವನ್ನು ಪಡೆದುಕೊಂಡಿರುವುದು ಗಮನಾರ್ಹವಾಗಿದೆ.

ಶಿವಮೊಗ್ಗದಿಂದ ಶಿಕಾರಿಪುರ ಪಟ್ಟಣಕ್ಕೆ ಬಸ್ ಆಗಮಿಸುತ್ತಿದ್ದು, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಇಪ್ಪತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಗೊಂಡ ಪ್ರಯಾಣಿಕರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ತೀವ್ರವಾಗಿ ಗಾಯಗೊಂಡ ಹತ್ತಕ್ಕೂ ಹೆಚ್ಚು ಪ್ರಯಾಣಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.