8 ವರ್ಷದ ದಾಂಪತ್ಯ ಜೀವನ ತೊರೆದು, ಪ್ರಿಯಕರನ ಜೊತೆ ಕಾರಿನಲ್ಲಿ ವಿವಾಹವಾದ ಪತ್ನಿ!!

ಹಾಸನ: ಎಂಟು ವರ್ಷ ಪತಿ ಪ್ರಕಾಶ್‌ನೊಂದಿಗೆ ಸಂಸಾರ ನಡೆಸಿ ಇದೀಗ ಪತ್ನಿ ಹರ್ಷಿತಾ ಪ್ರಿಯಕರನ ಜೊತೆ ಓಡಿ ಹೋಗಿ ಕಾರಿನಲ್ಲೇ ಮದುವೆಯಾಗಿರುವ ಘಟನೆ ಹಾಸನ ತಾಲ್ಲೂಕಿನ ಮುಕುಂದೂರು ಗ್ರಾಮದಲ್ಲಿ ನಡೆದಿದೆ.

ನಿಮ್ಮ ಎಲ್ಲಾ ರೀತಿಯ ಡಾಕ್ಯುಮೆಂಟೇಶನ್ ಮತ್ತು ಲೀಗಲ್ ಸರ್ವಿಸ್‌ ಅಗತ್ಯತೆಗಾಗಿ ಈಗಲೇ ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಗ್ರೂಪ್ ಸೇರಿಕೊಳ್ಳಿ.

ಪ್ರಕಾಶ್ ಮುಕುಂದೂರು ಗ್ರಾಮದ ನಿವಾಸಿಯಾಗಿದ್ದು, ಹರ್ಷಿತಾ ಅರಕಲಗೂಡು ತಾಲ್ಲೂಕಿನ ಮುಂಡಗೋಡು ಗ್ರಾಮದ ನಿವಾಸಿ ಎನ್ನಲಾಗಿದೆ.

ಕಳೆದ ಎಂಟು ವರ್ಷಗಳ ಹಿಂದೆ ಅಂದರೆ 2017ರ ಮಾ.30ರಂದು ಪ್ರಕಾಶ್ ಅವರು ಸ್ವಂತ ಅತ್ತೆ ಮಗಳಾದ ಹರ್ಷಿತಾಳನ್ನು ಮದುವೆಯಾಗಿದ್ದರು. ದಂಪತಿಗೆ 7 ವರ್ಷದ ಗಂಡು ಮಗುವಿದೆ. ಕಳೆದ ಮಾ.30ರಂದು ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೋಗಿದ್ದ ಹರ್ಷಿತಾ ಮತ್ತೆ ಮನೆಗೆ ವಾಪಸ್ಸಾಗಿರಲಿಲ್ಲ. ಹೀಗಾಗಿ ಹರ್ಷಿತಾ ಪೋಷಕರು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆಗ ಹರ್ಷಿಳಾನ್ನು ಪತ್ತೆ ಹಚ್ಚಿದ ಪೊಲೀಸರು, ಆಕೆಯನ್ನು ಠಾಣೆಗೆ ಕರೆಸಿದಾಗ, ನಾನು ಪತಿ ಜೊತೆ ಹೋಗುವುದಿಲ್ಲ. ಪ್ರಿಯಕರ ಸಚಿನ್ ಜೊತೆ ಹೋಗುತ್ತೇನೆಂದು ಹರ್ಷಿತಾ ಹಠ ಹಿಡಿದಿದ್ದಳು. ನಂತರ ಪೊಲೀಸರು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ್ದರು. ಬಳಿಕ ಹರ್ಷಿತಾ ಅನಾರೋಗ್ಯದ ನಾಟಕವಾಡಿ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಸಾಂತ್ವಾನ ಕೇಂದ್ರದಿಂದ ಹೊರಬಂದು, ಪ್ರಿಯಕರನ ಜೊತೆ ಕಾರಿನಲ್ಲಿ ವಿವಾಹವಾಗಿದ್ದರು.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಮದುವೆಯಾದ ಬಳಿಕವೂ ಪತಿ ಪ್ರಕಾಶ್, ಪತ್ನಿಯ ತಪ್ಪನ್ನು ಕ್ಷಮಿಸಿ ಮನೆಗೆ ಕರೆದುಕೊಂಡು ಬಂದಿದ್ದರು. ಒಂದು ದಿನ ಪತಿಗೆ ಜೊತೆಗೆ ಇದ್ದು, ಮಾರನೇ ದಿನ ಹರ್ಷಿತಾ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ.

ಸದ್ಯ ಪತಿ ಪ್ರಕಾಶ್ ಪತ್ನಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

error: Content is protected !!