ಪದ್ಮವಿಭೂಷಣ ಆಶಾ ಭೋಸ್ಲೆ ಇನ್ನಿಲ್ಲ

ಮುಂಬೈ: ಖ್ಯಾತ ಗಾಯಕಿ, ಪದ್ಮವಿಭೂಷಣ ಆಶಾ ಭೋಸ್ಲೆ(92 ) ಅವರು ಮುಂಬೈನಲ್ಲಿ (Mumbai) ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಆಶಾ ಭೋಸ್ಲೆ ಅವರು ಹಿಂದಿಯಷ್ಟೇ ಅಲ್ಲದೆ, ಕನ್ನಡ ಹಾಡುಗಳನ್ನು ಕೂಡಾ ಹಾಡಿದ್ದರು. ಗಜಲ್, ಶಾಸ್ತ್ರೀಯ ಸಂಗೀತದಲ್ಲಿ ಫೇಮಸ್ ಆಗಿದ್ದರು.
ಭಾರತದ 20 ಭಾಷೆಗಳಲ್ಲಿ 12 ಸಾವಿರಕ್ಕೂ ಅಧಿಕ ಹಾಡುಗಳನ್ನ ಹಾಡಿದ್ದಾರೆ. ಪದ್ಮವಿಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಆಶಾ ಭೊಸ್ಲೆ ಭಾಜನರಾಗಿದ್ದಾರೆ. ಅತಿ ಹೆಚ್ಚು ಹಾಡುಗಳನ್ನು ಹಾಡಿದ ಗಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಗಿನ್ನೆಸ್ ದಾಖಲೆಯನ್ನು ನಿರ್ಮಿಸಿದ್ದಾರೆ.

error: Content is protected !!