
ನವದೆಹಲಿ: ಅಸ್ಸಾಂ, ಪುದುಚೇರಿ, ಕೇರಳ ವಿಧಾನಸಭೆಯಲ್ಲಿ ಗುರುವಾರ(ಎ.09) ಮತದಾನ ನಡೆದಿದ್ದು, 2021ರ ಮತದಾನಕ್ಕೆ ಹೋಲಿಸಿದರೆ ಈ ಬಾರಿ ದಾಖಲೆಯ ಮತದಾನವಾಗಿದೆ ಎಂದು ವರದಿಯಾಗಿದೆ.

ಅಸ್ಸಾಂನಲ್ಲಿ ಶೇ. 85.49, ಕೇರಳದಲ್ಲಿ ಶೇ. 78.13, ಪುದುಚೇರಿಯಲ್ಲಿ ಶೇ. 89.87ರಷ್ಟು ಮತದಾನ ಗುರುವಾರ(ಎ.09) ದಾಖಲಾಗಿದೆ.

ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಇದುವರೆಗಿನ ಅತಿ ಹೆಚ್ಚು ಅಂದರೆ ಶೇ 85.64ರಷ್ಟು ಮತದಾನವಾಗಿದೆ. 2016ರಲ್ಲಿನ ಶೇ 84.67ರಷ್ಟು ಮತದಾನವಾಗಿದ್ದಾರೆ. 2021ರಲ್ಲಿ ರಾಜ್ಯವು ಶೇ 82.04ರಷ್ಟು ಮತದಾನವಾಗಿತ್ತು ಎಂದು ವರದಿಯಾಗಿದೆ. ಎಸ್‌ಐಆರ್ ಪ್ರಕ್ರಿಯೆ ನಡೆಸಿದ ಬಳಿಕ ಶೇಕಡವಾರು ಮತದಾನದಲ್ಲಿ ಏರಿಕೆ ಕಂಡಿದೆ ಎನ್ನಲಾಗಿದೆ.
