ಮಂಗಳೂರು: ಜಮಿಯತ್ ಅಹ್ಲೆ ಹದೀಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ನಗರದ ಪುರಭವನದಲ್ಲಿ ಇದೇ ಏಪ್ರಿಲ್ 18 ಮತ್ತು 19ರಂದು ಎರಡು ದಿನಗಳ ಕಾಲ ಐತಿಹಾಸಿಕ ‘ಅಹ್ಲೆ ಹದೀಸ್ ಸಮ್ಮೇಳನ’ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಮಿತಿ ಅಧ್ಯಕ್ಷರಾದ ಜನಾಬ್ ನಜ್ಮುದ್ದೀನ್ ಅಸದಿ ಅವರು ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬೃಹತ್ ಸಮ್ಮೇಳನವು ಅಖಿಲ ಭಾರತ ಜಮಿಯತ್ ಅಹ್ಲೆ ಹದೀಸ್ ಅಧ್ಯಕ್ಷರಾದ ಮೌಲಾನ ಅಸ್ಗರ್ ಅಲಿ ಇಮಾಮ್ ಮೆಹದಿ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾದ ಮೌಲಾನ ಅಬ್ದುಲ್ ವಹಾಬ್ ಜಾಮಿಈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಜನಾಬ್ ಅಸ್ಲಂ ಖಾನ್ ಮತ್ತು ಖಜಾಂಚಿ ಕೆ.ಜೆ. ಮನ್ಸೂರ್ ಅರ್ಷದ್ ಕುರೇಶಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಖ್ಯಾತರಾದ ಭಾರತದ ಪ್ರಸಿದ್ಧ ಧಾರ್ಮಿಕ ವಿದ್ವಾಂಸರುಗಳಾದ ಶೇಖ್ ಮೆಹರಾಜ್ ರಬ್ಬಾನಿ, ಶೇಖ್ ಅಬೂ ಸೈದ್ ಝುಮೈರ್, ಶೇಖ್ ಅಬ್ದುಲ್ ಅಝೀಮ್ ಮದನಿ, ಶೇಖ್ ಅಬ್ದುಲ್ ಹಸೀಬ್ ಮದನಿ, ಶೇಖ್ ರಹಮತುಲ್ಲಾ ಅಬ್ದುಲ್ ಕರೀಮ್ ಮದನಿ, ಶೇಖ್ ತಾರಿಕ್ ಶಫೀಉರ್ರಹ್ಮಾನ್ ಮದನಿ, ಶೇಖ್ ಬದೀಉಝ್ಝಮಾ ಮದನಿ, ಶೇಖ್ ಹುಸೈನ್ ಮದನಿ, ಶೇಖ್ ಅಬೂ ರಿಝ್ವಾನ್ ಮುಹಮ್ಮದ್, ಶೇಖ್ ಅಬ್ದುಲ್ ಖದಿರ್ ಉಮ್ಮಿ, ಶೇಖ್ ಅಬ್ದುಸ್ಸಲಾಮ್ ಸಲಫಿ, ಶೇಖ್ ಝುಬೈರ್ ಮದನಿ, ಶೇಖ್ ತಾ ವಲಿಯುಲ್ಲಾ ಉಮ್ಮಿ, ಶೇಖ್ ಅಬ್ದುಲ್ ವಾರಿಸ್ ಮದನಿ, ಶೇಖ್ ಶಾಕಿರ್ ಮದನಿ, ಶೇಖ್ ಐಜಾಝ್ ಅರ್ಷದ್ ನದ್ವಿ, ಶೇಖ್ ಹಬೀಬುರ್ರಹ್ಮಾನ್ ಸಲಫಿ ಹಾಗೂ ಶೇಖ್ ಅಬೂ ಉಮರ್ ಪರ್ವೇಝ್ ಮದನಿ ಸೇರಿದಂತೆ ಮುಂತಾದ ಉಲಮಾಗಳು ಮತ್ತು ಗಣ್ಯರು ಭಾಗವಹಿಸಿ ಜ್ಞಾನಾರ್ಜನೆ ನಡೆಸಿಕೊಡಲಿದ್ದಾರೆ.

ಈ ಐತಿಹಾಸಿಕ ಸಮ್ಮೇಳನಕ್ಕೆ ಪುರುಷರೊಂದಿಗೆ ಮಹಿಳೆಯರಿಗೂ ಭಾಗವಹಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ವಿನಂತಿಸಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಖಜಾಂಚಿ ಮುಹಮ್ಮದ್ ನದೀಮ್, ಮುಖ್ಯ ಸಲಹೆಗಾರರಾದ ಶೇಖ್ ಅಮೀನ್ ಅರ್ಷದ್, ಸಂಘಟನಾ ಕಾರ್ಯದರ್ಶಿ ಅಬ್ದುಸ್ಸಮದ್ ಬಜಾಲ್ ಹಾಗೂ ಹಾಫಿಝ್ ಮುಹಮ್ಮದ್ ಯಾಸೀನ್ ಅರ್ಷದ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.