ಲೆಬನಾನ್ ಮೇಲೆ ಇಸ್ರೇಲ್ ಭೀಕರ ದಾಳಿ; 200ಕ್ಕೂ ಹೆಚ್ಚು ಮಂದಿ ಸಾ*ವು!

ಲೆಬನಾನ್: ಮಧ್ಯಪ್ರಾಚ್ಯದ ಸಂಘರ್ಷಕ್ಕೆ ಇರಾನ್‌ ಹಾಗೂ ಅಮೆರಿಕಾ 2ವಾರಗಳ ಕದನವಿರಾಮ ಘೋಷಿಸಿದ್ದು, ಇದಕ್ಕೆ ಇಸ್ರೇಲ್‌ ಸಹ ಒಪ್ಪಿಕೊಂಡಿದೆ. ಆದಾಗ್ಯೂ, ಈ ಕದನವಿರಾಮ ಲೆಬನಾನ್‌ ಪ್ರಾಂತ್ಯಕ್ಕೆ ಅನ್ವಯಿಸುವುದಿಲ್ಲ ಎಂದು ಪ್ರತಿಪಾದಿಸುತ್ತಿದ್ದು, ದಾಳಿಯ ತೀವ್ರತೆಯನ್ನು ಹೆಚ್ಚಿಸಿದೆ. ಹೀಗೆ ಹೆಜ್ಬುಲ್ಲಾ ಜೊತೆಗಿನ ಯುದ್ಧದ ಬಳಿಕ ಇದೇ ಮೊದಲಬಾರಿಗೆ ಭಾರಿ ಪ್ರಮಾಣದ ವೈಮಾನಿಕ ದಾಳಿ ನಡೆಸಿದ್ದು, ಇದರಿಂದಾಗಿ ಸುಮಾರು 200ಕ್ಕೂ ಅಧಿಕ ಜನ ಸಾವನ್ನಪ್ಪಿದ್ದು, 1000ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಕದನವಿರಾಮದಲ್ಲಿ ಲೆಬನಾನ್‌ ಒಳಗೊಂಡಂತೆ ಪ್ರಾದೇಶಿಕವಾಗಿ ಎಲ್ಲಾ ರಾಷ್ಟ್ರಗಳ ಮೇಲೂ ಮಿಲಿಟರಿ ಕಾರ್ಯಚರಣೆಗಳನ್ನು ನಿಲ್ಲಿಸಬೇಕು ಎಂಬುದು ಕದನವಿರಾಮದಲ್ಲಿರುವ ಪ್ರಮುಖ ಅಂಶವಾಗಿದೆ. ಆದಾಗ್ಯೂ, ಇದನ್ನು ಒಪ್ಪದ ಇಸ್ರೇಲ್‌ ಲೆಬನಾನ್‌ ಮೇಲೆ ದಾಳಿ ಮುಂದುವರೆಸಿದ್ದು, ಬೈರುತ್‌, ದಕ್ಷಿಣ ಲೆಬಾನನ್‌ ಹಾಗೂ ಬೆಕಾ ಕಣಿವೆ ಸೇರಿದಂತೆ ಹಲವೆಡೆ 100 ಕ್ಕೂ ಹೆಚ್ಚು ವಾಯುದಾಳಿಗಳನ್ನು ನಡೆಸಿದ್ದು, ಇದರಿಂದಾಗಿ ಈವರೆಗೂ ಕನಿಷ್ಠ 254 ಜನ ಸಾವನ್ನಪ್ಪಿದ್ದು, 1,165 ಜನ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ ನ ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಈ ದಾಳಿಯ ಕುರಿತು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ವಿಡಿಯೋ ಹೇಳಿಕೆ ನೀಡಿದ್ದು, “ಇರಾನ್ ಪರವಾಗಿ ಇಸ್ರೇಲ್‌ ಮೇಲೆ ದಾಳಿ ಮಾಡಿದರೆ, ಹೆಜ್ಬುಲ್ಲಾ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ನಾವು ಈಗಾಗಲೇ ನಯೀಮ್ ಕಾಸ್ಸೆಮ್‌ಗೆ ಎಚ್ಚರಿಕೆ ನೀಡಿದ್ದೇವು. ಇದರಂತಯೇ ಇದೀಗ ಹೆಜ್ಬುಲ್ಲಾ ಮೇಲೆ ಹಠಾತ್‌ ದಾಳಿಗಳು ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಇಸ್ರೇಲ್‌ ಕದನವಿರಾಮದಲ್ಲಿ ಲೆಬನಾನ್‌ ಒಳಗೊಂಡಿಲ್ಲ ಎಂದು ಪ್ರತಿಪಾದಿಸುತ್ತಿದ್ದು, ಈ ಕುರಿತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹ ಬೆಂಬಲಿಸಿದ್ದು, ಹೆಜ್ಬುಲ್ಲಾ ಕಾರಣದಿಂದಾಗಿ ಲೆಬನಾನ್‌ ಅನ್ನು ಕದನವಿರಾಮದಲ್ಲಿ ಒಳಪಡಿಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಇದಕ್ಕೆ ವಿರುದ್ದವಾಗಿ ಕದನವಿರಾಮದ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ ಹಾಗೂ ವಿರಾಮಕ್ಕೆ ಅಂಗೀಕರಿಸಿರುವ ಇರಾನ್‌ ಇದನ್ನು ಅಲ್ಲಗೆಳೆಯುತ್ತಿವೆ. ಅಲ್ಲದೆ, ಇದರಿಂದಾಗಿ ಮತ್ತೆ ಹೊರ್ಮುಜ್‌ ಜಲಸಂಧಿಯನ್ನು ಮುಚ್ಚಿದೆ ಎಂದು ವರದಿಯಾಗಿದೆ.

ಈ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿ ಲೆಬನಾನ್‌ನಲ್ಲಿ ಕದನ ವಿರಾಮವನ್ನು ಉಲ್ಲಂಘಿಸುವುದನ್ನು ಮುಂದುವರಿಸಿದರೆ ಕದನ ವಿರಾಮ ಒಪ್ಪಂದದಿಂದ ಹೊರಬರಲು ಇರಾನ್ ಸಿದ್ಧವಾಗಿದೆ ಎಂದು ಇರಾನ್ ಮೂಲಗಳನ್ನು ಉಲ್ಲೇಖಿಸಿದ ಇರಾನ್‌ ನ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

error: Content is protected !!