ಕೋಳಿ ಅಂಕಕ್ಕೆ ಪೊಲೀಸರ ದಾಳಿ; ಮೂವರು ವಶಕ್ಕೆ

ವಿಟ್ಲ: ಸಾರ್ವಜನಿಕ ಗುಡ್ಡೆಯ ಸ್ಥಳದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದ್ದ ವೇಳೆ ಎಸ್.ಐ.ರತ್ನ ಕುಮಾರ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ ಘಟನೆ ಇಡ್ಕಿದು ಗ್ರಾಮದ ಮಿತ್ತೂರು ಹೇಮಾಜೆ ಹೋಗುವ ರೈಲ್ವೇ ಬ್ರಿಡ್ಜ್ ಬಳಿ ನಡೆದಿದೆ.

ಜಯಾನಂದ, ಪ್ರಣೀತ್ ಪ್ರಶ್ಮಿತ್ ಮತ್ತು ಯೋಗೀಶ್ ಎಂಬವರನ್ನು ವಶಕ್ಕೆ ಪಡೆದುಕೊಂಡು 2600 ರೂ.ನಗದು ಮತ್ತು 1 ಹುಂಜ ಕೋಳಿ,2 ಕೋಳಿ ಬಾಳುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: Content is protected !!