ಏ.19-23: ಅತ್ತಾವರ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಬ್ರಹ್ಮಕಲಶ ಸಂಭ್ರಮ

ಅತ್ತಾವರ: ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಏಪ್ರಿಲ್ 19 ರಿಂದ 23ರ ತನಕ ಬ್ರಹ್ಮಕಲಶ ನಡೆಯಲಿದೆ. ಎಂದು ಅಯ್ಯಪ್ಪ ಸ್ವಾಮಿ ಭಕ್ತ ಸಮಿತಿ ಅಧ್ಯಕ್ಷರಾದ ಸೂರಜ್ ರಾಘವನ್ ತಿಳಿಸಿದರು. ಪುರಾಣ ಇತಿಹಾಸ ಹೊಂದಿರುವ ಈ ಕ್ಷೇತ್ರದಲ್ಲಿ ಬ್ರಹ್ಮ ಕಳಸ ಸೌಭಾಗ್ಯ ಒದಗಿರುವುದು ನಮ್ಮೆಲ್ಲರ ಭಾಗ್ಯ ಎಂದರು.

ಮೊದಲು ಮೈದಾನದಲ್ಲಿ ಫೋಟೋ ಇಟ್ಟು ಪೂಜೆ ನಡೆಯುತ್ತಿತ್ತು. ಪ್ರಸ್ತುತ ಇರುವ ಗುಡಿಯ ದುರಸ್ತಿ ಕಾರ್ಯ ನಡೆದು ಎರಡುವರೆ ಕೋಟಿ ವೆಚ್ಚದಲ್ಲಿ ನೂತನ ಅಯ್ಯಪ್ಪ ಸ್ವಾಮಿ ದೇವಾಲಯ ನಿರ್ಮಾಣಗೊಳ್ಳಲಿದೆ ಎಂದು ಹೇಳಿದರು.

ಅಯ್ಯಪ್ಪ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಕ್ಷಿತಿ ಮಂಗ್ಳೂರು ಬೃಹ್ಮ ಕಲಶ ಹೊರೆ ಕಾಣಿಕೆ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು .ಅಯ್ಯಪ್ಪ ಭಕ್ತ ಸಮಿತಿ ಕಾರ್ಯಾಧ್ಯಕ್ಷರಾದ ಗೋಕುಲ್ ದಾಸ್ ರವರು ಸಾವಿರಾರು ಮಾಲಾಧಾರಿಗಳು ಈ ಕ್ಷೇತ್ರದಲ್ಲಿ ಮಾಲೆ ಹಾಕಿ ಶಬರಿಮಲೆ ಯಾತ್ರೆ ಮಾಡಿದ್ದು, ವಿಶೇಷವಾಗಿ ಈ ಕಾರ್ಯಕ್ರಮಕ್ಕೆಪಂದಳ ರಾಜಾ ವಂಶಸ್ಥರಾದ ಶ್ರೀ ನಾರಾಯಣ ವರ್ಮಾ ತಾಂಬುರಾನ್ ಬರುವುದು ವಿಶೇಷವಾಗಿದೆ ಎಂದರು.

ಅಯ್ಯಪ್ಪ ಭಕ್ತಿ ಸಮಿತಿ ಕಾರ್ಯಾಧ್ಯಕ್ಷರಾದ ಮುರಳೀಧರ್ ,ಅಯ್ಯಪ್ಪ ಸ್ವಾಮಿ ಬ್ರಹ್ಮ ಕಳಸ ಸಮಿತಿ ಅಧ್ಯಕ್ಷರಾದ ರಾಜರತ್ನ ಸನಿಲ್ ,ಸ್ವಾಗತ ಸಮಿತಿಯ ಗೌರವ ಕಾರ್ಯದರ್ಶಿ ಜನಾರ್ಧನ್ ಅತ್ತಾವರ ,ಸ್ವಾಗತ ಸಮಿತಿಯ ಉಪಾಧ್ಯಕ್ಷ ಡಾ. ಮಾಲತಿ ಶೆಟ್ಟಿ ಮಾಣೂರು ,ಅಯ್ಯಪ್ಪ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸೂರ್ಯಕಾಂತ ಎ. ಉಪಸ್ಥಿತರಿದ್ದರು.

ಡಾ. ಮಾಲತಿ ಶೆಟ್ಟಿ ಮಾಣೂರು ಕಾರ್ಯಕ್ರಮ ನಿರೂಪಿಸಿ , ಸ್ವಾಗತಿಸಿ, ವಂದಿಸಿದರು.

error: Content is protected !!