
ಅಜೆಕಾರು: ಮರ್ಣೆ ಗ್ರಾಮದ ಕಾಡುಹೊಳೆ ಜನಪ್ರೀಯಾ ರೈಸ್ ಮಿಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೋರ್ವರು ಮಾ.25ರಂದು ಸಂಜೆ ಉಡುಪಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸ್ಸು ಬಾರದೆ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಸೊರಬ ಸಮನವಳ್ಳಿ ಗ್ರಾಮದ ಹನುಮಂತಪ್ಪ(50) ನಾಪತ್ತೆಯಾದವರು.

ಸಾಧಾರಣ ಮೈಕಟ್ಟು, ಎಣ್ಣೆ ಕಪ್ಪು ಮೈಬಣ್ಣ, 5 ಅಡಿ 3 ಇಂಚು ಎತ್ತರ ಹೊಂದಿರುವ ಇವರು, ಕನ್ನಡ ಭಾಷೆ ಮಾತನಾಡಬಲ್ಲರು. ಇವರು ನಾಪತ್ತೆಯಾದ ದಿನ ಬಿಳಿ ಬಣ್ಣದ ತೋಳಿನ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಹಣೆಯ ಮೇಲೆ ಶಸ್ತ್ರಚಿಕಿತ್ಸೆ ಮಾಡಿದ ಗುರುತು ಇದೆ ಎಂದು ಮನೆಯವರು ತಿಳಿಸಿದ್ದಾರೆ.

ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.