ಶಾಸಕ ಕಾಮತ್ ನೇತೃತ್ವದಲ್ಲಿ ಕದ್ರಿಯಲ್ಲಿ ಬಬ್ಬುಸ್ವಾಮಿ ದೈವಸ್ಥಾನದ ನೂತನ ಕಟ್ಟಡ ಉದ್ಘಾಟನೆ

ಮಂಗಳೂರು: ಶ್ರೀ ದೈವರಾಜ ಕೋಟೆದ ಬಬ್ಬುಸ್ವಾಮಿ ದೈವಸ್ಥಾನ, ಕದ್ರಿ, ಮಲ್ಲಿಕಟ್ಟೆ ಇಲ್ಲಿ ಸುಮಾರು ರೂ.15 ಲಕ್ಷ ವೆಚ್ಚದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯು ಪೂರ್ಣಗೊಂಡಿದ್ದು ಇತ್ತೀಚಿಗೆ ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಉದ್ಘಾಟನಾ ಸಮಾರಂಭವು ನಡೆಯಿತು.

ನಂತರ ಮಾತನಾಡಿದ ಶಾಸಕರು, ಸರ್ಕಾರದ ಆರಾಧನಾ ಯೋಜನೆ ಸೇರಿದಂತೆ ವಿವಿಧ ಅನುದಾನಗಳ ಮೂಲಕ ಒಟ್ಟು 15 ಲಕ್ಷ ಹೊಂದಿಸಿಕೊಂಡು ದೈವಸ್ಥಾನದ ಚಾಕರಿಯಲ್ಲಿ ತೊಡಗಿರುವವರಿಗೆ ಕೊಠಡಿ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿರುವುದು ನನ್ನ ಪಾಲಿಗೆ ಸಂತಸದ ಕ್ಷಣವಾಗಿದೆ. ಇಲ್ಲಿನ ಬಬ್ಬುಸ್ವಾಮಿಗೆ ಸ್ವರ್ಣ ಕವಚ ಮುಗ ಹಾಗೂ ಸ್ವರ್ಣ ಕವಚ ಖಡ್ಗಲೆ ಸಮರ್ಪಣೆಯಾಗಿರುವ ಶುಭ ಸಂದರ್ಭದಲ್ಲೇ ಉದ್ಘಾಟನಾ ಕಾರ್ಯ ನಡೆದಿರುವುದು ನನ್ನ ಭಾಗ್ಯ. ಈ ಹಿಂದೆ ನಿಕಟಪೂರ್ವ ಪಾಲಿಕೆ ಸದಸ್ಯರಾದ ಶ್ರೀ ಮನೋಹರ ಶೆಟ್ಟಿ ಕದ್ರಿಯವರ ವಿಶೇಷ ಮುತುವರ್ಜಿಯಲ್ಲಿ ಈ ದೈವಸ್ಥಾನಕ್ಕೆ ಸುಮಾರು 40 ಲಕ್ಷ ವೆಚ್ಚದ ಮೇಲ್ಛಾವಣಿ ಸಹಿತ ಇಂಟರ್ ಲಾಕ್ ಕೂಡಾ ನಿರ್ಮಾಣವಾಗಿರುವುದು ವಿಶೇಷ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ, ಕದ್ರಿ ಕೃಷ್ಣ ಅಡಿಗ, ಶಿವಪ್ಪ ನಂತೂರು, ಶಕಿಲಾ ಕಾವ, ಕದ್ರಿ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಜೇಂದ್ರ ಚಿಲಿಂಬಿ, ಕಿರಣ್ ಕುಮಾರ್ ಜೆ., ಪ್ರೀತಾನಂದನ್, ಉಷಾ ಪ್ರಭಾಕರ್, ಭಾಸ್ಕರ ಚಂದ್ರ ಶೆಟ್ಟಿ, ಕಿರಣ್ ಕುಮಾರ್, ಯಶವಂತ ಕುದ್ರೋಳಿ, ಹೇಮಾನಂದ, ಹರೀಶ್ ಶೇಟ್, ಸೇರಿದಂತೆ ದೈವಸ್ಥಾನದ ಗುರಿಕಾರರು, ಭಕ್ತರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

error: Content is protected !!