ಟ್ರಂಪ್‌ ʻಡಬಲ್ ಗೇಮ್’.. ಶಾಂತಿ ಮಂತ್ರದ ಹಿಂದೆ ಅಡಗಿದೆ ಮಹಾವಿನಾಶದ ಸಂಚು! ಜಗತ್ತನ್ನು ನರಕಕ್ಕೆ ತಳ್ಳಲಿದೆಯೇ ಅಮೆರಿಕದ ಈ ʻಡೆಡ್ಲಿ’ ಪ್ಲಾನ್?

ವಾಷಿಂಗ್ಟನ್/ತೆಹ್ರಾನ್: ಇಡೀ ಜಗತ್ತು ಈಗ ಉರಿಯುವ ಜ್ವಾಲಾಮುಖಿಯ ಮೇಲೆ ಕುಳಿತಿದೆ! ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಂತಿಯ ಜಪ ಮಾಡುತ್ತಾ, 15 ಅಂಶಗಳ ಸಂಧಾನದ ಆಮಿಷವೊಡ್ಡುತ್ತಿದ್ದಾರೆ. ಆದರೆ, ಈ ಶಾಂತಿ ಮಂತ್ರದ ಹಿಂದೆ ಅಡಗಿರೋದು ಮಾತ್ರ ಅತ್ಯಂತ ಭಯಾನಕ ಡೆಡ್ಲಿ ಗೇಮ್. ಇದು ಸಂಧಾನವಲ್ಲ, ಇಡೀ ಮಧ್ಯಪ್ರಾಚ್ಯವನ್ನೇ ಸ್ಮಶಾನ ಮಾಡಲು ಅಮೆರಿಕ ಹೆಣೆದಿರೋ ಭೀಕರ ತಂತ್ರ!

ಸಂಧಾನದ ನಾಟಕ.. ಸೈನ್ಯದ ಅಟ್ಟಹಾಸ!
ನೋಡಿ ಟ್ರಂಪ್ ಅವರ ಈ ಡಬಲ್ ಗೇಮ್… ಒಂದೆಡೆ ಪಾಕಿಸ್ತಾನದ ಮೂಲಕ ಇರಾನ್‌ಗೆ ಪ್ರೇಮಪತ್ರದಂತೆ 15 ಅಂಶಗಳ ಕದನ ವಿರಾಮದ ಪ್ರಸ್ತಾವನೆ ಕಳುಹಿಸಿದ್ದಾರೆ. ಆದರೆ, ಅದೇ ಹೊತ್ತಿನಲ್ಲಿ ಅಮೆರಿಕದ ಪೆಂಟಗನ್‌ನಿಂದ ಹೊರಬಿದ್ದಿರುವ ಸುದ್ದಿ ಎಂಥವರನ್ನೂ ಬೆಚ್ಚಿಬೀಳಿಸುತ್ತಿದೆ. ಈಗಾಗಲೇ ಮಧ್ಯಪ್ರಾಚ್ಯದಲ್ಲಿ ಬೀಡುಬಿಟ್ಟಿರುವ 50,000 ಅಮೆರಿಕನ್ ಸೈನಿಕರ ಜೊತೆಗೆ, ಈಗ ಹೊಸದಾಗಿ 1,000 ಪ್ಯಾರಾಟ್ರೂಪರ್‌ಗಳು ಮತ್ತು 5,000 ಮರೀನ್ ಸೈನಿಕರ ದಂಡೇ ಅಲ್ಲಿಗೆ ನುಗ್ಗುತ್ತಿದೆ!

ಇದು ಶಾಂತಿಗಾಗಿ ನಡೆಯುತ್ತಿರುವ ತಯಾರಿಯಲ್ಲ, ಬದಲಾಗಿ ಇರಾನ್ ಮೇಲೆ ಅಂತಿಮ ಪ್ರಹಾರ ನಡೆಸಲು ಅಮೆರಿಕ ಹೂಡಿರೋ ಮಹಾಸಂಚು. ಈ ಸೇನಾ ಜಮಾವಣೆ ನೋಡಿದ್ರೆ, ಕ್ಷಣಮಾತ್ರದಲ್ಲಿ ಇಡೀ ಮಧ್ಯಪ್ರಾಚ್ಯ ರಕ್ತದ ಕೆರೆಯಾಗೋದ್ರಲ್ಲಿ ಸಂಶಯವೇ ಇಲ್ಲ!

ನರಕವಾಗುತ್ತಿದೆ ನಗರಿಗಳು.. ಅಣು ಸ್ಥಾವರಗಳ ಮೇಲೆ ಕಣ್ಣು!
ಇತ್ತ ಟ್ರಂಪ್ ಮಾತುಕತೆ ಅಂತ ಕತೆ ಹೇಳ್ತಿದ್ರೆ, ಅತ್ತ ಇಸ್ರೇಲ್ ಮತ್ತು ಅಮೆರಿಕದ ಯುದ್ಧ ವಿಮಾನಗಳು ಇರಾನ್ ರಾಜಧಾನಿ ತೆಹ್ರಾನ್ ಮೇಲೆ ಬೆಂಕಿಯುಂಡೆಗಳನ್ನು ಸುರಿಸುತ್ತಿವೆ. ದಕ್ಷಿಣ ತೆಹ್ರಾನ್‌ನಲ್ಲಿ ನಡೆದ ದಾಳಿಗೆ 12 ಮಂದಿ ಬಲಿಯಾಗಿದ್ದಾರೆ. ಆಘಾತಕಾರಿ ವಿಷಯ ಅಂದ್ರೆ, ಕ್ಷಿಪಣಿಗಳು ಈಗ ನೇರವಾಗಿ ಇರಾನ್ ಮತ್ತು ಇಸ್ರೇಲ್‌ನ ಅಣು ಸ್ಥಾವರಗಳ (Nuclear Sites) ಸಮೀಪವೇ ಬೀಳುತ್ತಿವೆ!

ವಿಶ್ವಸಂಸ್ಥೆ ಎಚ್ಚರಿಸಿದೆ – ಒಂದು ವೇಳೆ ಅಣು ಸ್ಥಾವರಗಳಿಗೆ ಏನಾದ್ರೂ ಹಾನಿಯಾದ್ರೆ, ಅದು ಕೇವಲ ಯುದ್ಧವಲ್ಲ, ಇಡೀ ಮಾನವಕುಲವನ್ನೇ ಸುಟ್ಟು ಭಸ್ಮ ಮಾಡುವ ಮಹಾವಿನಾಶ(Unmitigated Catastrophe)! ಇನ್ನು ಲೆಬನಾನ್‌ನಲ್ಲಿ ಸಾವಿನ ಸಂಖ್ಯೆ 1,000 ಗಡಿ ದಾಟಿದೆ. ಅಲ್ಲಿನ ಬೀದಿಗಳಲ್ಲಿ ಹೆಣಗಳ ರಾಶಿ ಬೀಳುತ್ತಿದೆ!

ಬಡವರ ಹೊಟ್ಟೆ ಮೇಲೆ ಯುದ್ಧದ ಬರೆ!
ಈ ಟ್ರಂಪ್‌ರ ಡಬಲ್ ಗೇಮ್ ನಿಂದಾಗಿ ಜಗತ್ತಿನ ಆರ್ಥಿಕತೆ ಅಕ್ಷರಶಃ ಕುಸಿದುಬಿದ್ದಿದೆ. ಜರ್ಮನಿಯಂತಹ ಶ್ರೀಮಂತ ದೇಶಗಳೇ ಈಗ ಕಂಗಾಲಾಗಿವೆ. ಇನ್ನು ನಮ್ಮ ಕರಾವಳಿಯ ಮೀನುಗಾರರ ಕಥೆ ಏನಾಗಬೇಡ? ತೈಲ ದರ ಏರಿಕೆ, ಹಡಗುಗಳ ಸಂಚಾರ ಸ್ಥಗಿತ – ಇವೆಲ್ಲವೂ ಸಾಮಾನ್ಯ ಜನರನ್ನ ನರಕಕ್ಕೆ ತಳ್ಳಲಿವೆ. ಅಮೆರಿಕ ತನ್ನ ಹಠಮಾರಿತನಕ್ಕೆ ಬಡವರನ್ನ ಬಲಿಪಶು ಮಾಡ್ತಿದೆ. ಇದು ಶಾಂತಿಯಲ್ಲ, ಇದು ವಿನಾಶದ ಆರಂಭ! ಎಚ್ಚರ… ನಿಮ್ಮ ತಟ್ಟೆಯ ಅನ್ನಕ್ಕೂ ಈ ಯುದ್ಧದ ಕಿಚ್ಚು ತಟ್ಟಲಿದೆ!

error: Content is protected !!