ಜಪ್ಪಿನಮೊಗರು ವಿ.ಎ. ಕಚೇರಿಗೆ ಪ್ರಿಂಟರ್ ಹಸ್ತಾಂತರ!!

ಮಂಗಳೂರು: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು ,ಸಂಸದರಾದ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಪ್ರಮುಖರಾದ ವಿಜಯ್ ಕುಮಾರ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ದಕ್ಷಿಣ ಮಹಾ ಶಕ್ತಿಕೇಂದ್ರ ವತಿಯಿಂದ ಎಸ್ ಇನ್ಫೋಟೆಕ್ ಮಂಗಳೂರು ಇದರ ಸಹಯೋಗದೊಂದಿಗೆ ವಿ ಎ ಕಛೇರಿ ಜಪ್ಪಿನಮೊಗರು ಇವರಿಗೆ ಕ್ಯಾನೊನ್ ಆಲ್‌ಇನ್‌ಒನ್ ಕಲರ್ ಪ್ರಿಂಟರ್ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಪ್ರವೀಣ್ ನಿಡ್ಡೆಲ್ ಪ್ರ. ಕಾರ್ಯದರ್ಶಿ ರಾಮ್ ಪ್ರಸಾದ್ ಕಾರ್ಪೊರೇಟರ್ಗಳಾದ ಬರತ್ ಸೂಟರ್ ಪೇಟೆ, ವೀಣಾಮಂಗಳಾ, ಅಜೀತ್ ಡಿಸಿಲ್ವಾ, ಸುಮತಿ, ಕೀರ್ತೇಶ್ ಅಮೀನ್ ಉಪಸ್ಥಿತರಿದ್ದರು.

error: Content is protected !!