ಬೆಂಜನಪದವು ಸರಕಾರಿ ಕಾಲೇಜಿಗೆ ಎಂಆರ್ ಪಿಎಲ್ ಅನುದಾನ: ಮಂಜುನಾಥ ಭಂಡಾರಿ ಮೆಚ್ಚುಗೆ

ಮಂಗಳೂರು: ಸರ್ಕಾರಿ ಪದವಿಪೂರ್ವ ಕಾಲೇಜು ಬೆಂಜನಪದವು ಇದರ ಕಾರ್ಯಕ್ರಮವೊಂದಕ್ಕೆ ಈ ಹಿಂದೆ ಎಂಆರ್ ಪಿಎಲ್ ಗ್ರೂಪ್ ಜನರಲ್ ಮೆನೇಜರ್ ಆಗಿರುವ ಕೃಷ್ಣ ಹೆಗಡೆ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಲೇಜಿನ ಸಭಾಂಗಣ ಮತ್ತು ತರಗತಿ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿತ್ತು.

ಇದಕ್ಕೆ ಸ್ಪಂದಿಸಿದ ಕಂಪೆನಿಯು ಸಭಾಂಗಣ ನಿರ್ಮಾಣಕ್ಕೆ 92 ಲಕ್ಷ ರೂ. ಹಾಗೂ ಮೂರು ತರಗತಿ ಕೊಠಡಿ ನಿರ್ಮಾಣಕ್ಕೆ 40 ಲಕ್ಷ ರೂ. ಹಣವನ್ನು ಎಂಆರ್ ಪಿಎಲ್ ನಿಧಿಯಿಂದ ಮಂಜೂರು ಮಾಡಿರುವುದಕ್ಕೆ ವಿಧಾನ ಪರಿಷತ್ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರು ಆಗಿರುವ ಮಂಜುನಾಥ ಭಂಡಾರಿ ಅವರು ಇದಕ್ಕೆ ಸಹಕರಿಸಿದ ಸಂಸ್ಥೆಯ ಗ್ರೂಪ್ ಜನರಲ್ ಮ್ಯಾನೇಜರ್ ಆಗಿರುವ ಕೃಷ್ಣ ಹೆಗಡೆ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

error: Content is protected !!