ಇರಾನ್‌ನ ‌ʻಹಾವಿನ ತಲೆ’ ಕತ್ತರಿಸಿದ ಅಮೆರಿಕ: ಐಆರ್‌ಜಿಸಿ ಪ್ರಧಾನ ಕಚೇರಿ ಧೂಳೀಪಟ!

ಟೆಹ್ರಾನ್:‌ ಕಳೆದ ನಲವತ್ತು ವರ್ಷಗಳಿಂದ ಮಧ್ಯಪ್ರಾಚ್ಯದ ಸಿಂಹಸ್ವಪ್ನವಾಗಿದ್ದ ಇರಾನ್‌ನ ಸಾಮ್ರಾಜ್ಯ ಈಗ ಅಕ್ಷರಶಃ ಕುಸಿದು ಬಿದ್ದಿದೆ. ಅತ್ತ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಸಿದ್ಧತೆ ನಡೆಯುತ್ತಿದ್ದರೆ, ಇತ್ತ ಅಮೆರಿಕದ ಕ್ಷಿಪಣಿಗಳು ಇರಾನ್‌ನ ಅತ್ಯಂತ ಶಕ್ತಿಶಾಲಿ ಸೇನಾ ಪಡೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಅಸ್ತಿತ್ವವನ್ನೇ ಅಳಿಸಿಹಾಕಿವೆ.

“ಹಾವಿನ ತಲೆ ಕತ್ತರಿಸಿದ್ದೇವೆ!”
ಸೋಮವಾರ ಬೆಳಿಗ್ಗೆ ಅಮೆರಿಕದ ಸೆಂಟ್ರಲ್ ಕಮಾಂಡ್ ಜಗತ್ತಿಗೆ ಒಂದು ಶಾಕಿಂಗ್ ಸುದ್ದಿ ನೀಡಿತು. “ನಾವು ಹಾವಿನ ತಲೆಯನ್ನು ಕತ್ತರಿಸಿದ್ದೇವೆ” ಎಂದು ಘೋಷಿಸಿದ ಅಮೆರಿಕ, ಟೆಹ್ರಾನ್‌ನಲ್ಲಿದ್ದ ಐಆರ್‌ಜಿಸಿ ಪ್ರಧಾನ ಕಚೇರಿಯನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದೆ. 1979ರ ಕ್ರಾಂತಿಯ ನಂತರ ಇರಾನ್‌ನ ಇಸ್ಲಾಮಿಕ್ ವ್ಯವಸ್ಥೆಯನ್ನು ರಕ್ಷಿಸುತ್ತಿದ್ದ ಈ ಗಣ್ಯ ಪಡೆಯ ಬಳಿ ಈಗ ಕೂರಲು ಒಂದು ಕಚೇರಿಯೂ ಉಳಿದಿಲ್ಲ!

IRGC 'BLOWS UP' U.S. Navy-Linked Vessels, Bombs American Base In 3 Gulf Nations | WATCH

ಅಮೆರಿಕ ಬಿಡುಗಡೆ ಮಾಡಿರುವ ಒಂದು ರೋಚಕ ವೀಡಿಯೊದಲ್ಲಿ, ಸಮುದ್ರದ ಹಡಗಿನಿಂದ ಹಾರಿದ ಒಂದೇ ಒಂದು ಕ್ಷಿಪಣಿ ಇಡೀ ಐಆರ್‌ಜಿಸಿ ಪ್ರಧಾನ ಕಚೇರಿಯನ್ನು ಸೆಕೆಂಡ್‌ಗಳಲ್ಲಿ ಮಣ್ಣುಮುಕ್ಕಿಸುವ ದೃಶ್ಯವಿದೆ. ಈ ದಾಳಿಯಲ್ಲಿ ಕ್ರಾಂತಿಕಾರಿ ಪಡೆಯ ಮುಖ್ಯಸ್ಥ ಮೊಹಮ್ಮದ್ ಪಕ್‌ಪೌರ್ ಕೂಡ ಸಾವನ್ನಪ್ಪಿದ್ದಾರೆ.

ಶನಿವಾರದಿಂದ ಆರಂಭವಾದ ಈ ಮಹಾ ಕಾರ್ಯಾಚರಣೆಯಲ್ಲಿ ಅಮೆರಿಕ ಬರೋಬ್ಬರಿ 1,000ಕ್ಕೂ ಹೆಚ್ಚುಗುರಿಗಳ ಮೇಲೆ ದಾಳಿ ಮಾಡಿದೆ. ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು ಮೌನವಾಗಿವೆ. ಸಮುದ್ರದಲ್ಲಿ ಇರಾನ್‌ನ ಜಲಾಂತರ್ಗಾಮಿ ನೌಕೆಗಳು ಜಲಸಮಾಧಿಯಾಗಿವೆ. ಬ್ಯಾಲಿಸ್ಟಿಕ್ ಕ್ಷಿಪಣಿ ತಾಣಗಳು ಈಗ ಕೇವಲ ಕಬ್ಬಿಣದ ತುಂಡುಗಳಾಗಿವೆ ಎಂದು ಹೇಳಲಾಗುತ್ತಿದೆ.
ಖಮೇನಿ ಅವರ ಸಾವಿನ ಸುದ್ದಿ ಹರಡುತ್ತಿದ್ದಂತೆ ದೇಶದ ಕೆಲವು ಭಾಗಗಳಲ್ಲಿ ಜನರು ಸಂಭ್ರಮಿಸುತ್ತಿದ್ದರೆ, ಇನ್ನು ಕೆಲವು ಕಡೆ ಭಯದ ವಾತಾವರಣವಿದೆ. ಟೆಹ್ರಾನ್‌ನ ಬೀದಿಗಳಲ್ಲಿ ಶಸ್ತ್ರಸಜ್ಜಿತ ಪೊಲೀಸರು ಮತ್ತು ಅರೆಸೇನಾ ಪಡೆಗಳು ಗಸ್ತು ತಿರುಗುತ್ತಿವೆ. ಇರಾನ್‌ನ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ.

ಒಂದು ಕಾಲದಲ್ಲಿ ಅಮೆರಿಕ ಮತ್ತು ಇಸ್ರೇಲ್‌ಗೆ ಸವಾಲು ಹಾಕುತ್ತಿದ್ದ ಇರಾನ್, ಇಂದು ತನ್ನ ಅಸ್ತಿತ್ವಕ್ಕಾಗಿ ಹೋರಾಡುವಂತಾಗಿದೆ.

error: Content is protected !!