ಮಾ.2-5: ಭಾರತ ಗಡಿ ಬಂದ್!

ಲಕ್ನೋ: ನೇಪಾಳದಲ್ಲಿ ಸಾರ್ವತ್ರಿಕ ಚುನಾವಣೆಯು ಮಾ.5ರಂದು ನಡೆಯಲಿದ್ದು, ಈ ವೇಳೆ ಭಾರತ-ನೇಪಾಳ ಗಡಿಯನ್ನು ಮಾ.2ರ ಮಧ್ಯರಾತ್ರಿಯಿಂದ ಮಾ.5ರ ಮಧ್ಯರಾತ್ರಿಯವರೆಗೆ ಮುಚ್ಚಲಾಗುತ್ತಿದೆ.

ಗಡಿ ಮುಚ್ಚುವುದಕ್ಕೆ ಸಂಬಂಧಿಸಿ ನೇಪಾಳದ ಗೃಹ ಸಚಿವಾಲಯವು ಫೆ.26ರಂದು ಭಾರತದೊಂದಿಗೆ ಅಧಿಕೃತ ಸಂವಹನ ನಡೆಸಿದ್ದು, ಮುಕ್ತ, ನ್ಯಾಯಸಮ್ಮತ, ನಿರ್ಭೀತ ಮತ್ತು ವಿಶ್ವಾಸಾರ್ಹ ಚುನಾವಣೆ ನಡೆಯುವುದನ್ನು ಖಾತ್ರಿಪಡಿಸಿಕೊಳ್ಳಲು, ಭಾರತಕ್ಕೆ ಹೊಂದಿಕೊಂಡಿರುವ ನೇಪಾಳದ ಬಂಕೆ ಜಿಲ್ಲೆಯ ಸಂಪೂರ್ಣ ಗಡಿ ಭಾಗ ಮುಚ್ಚಲಾಗುತ್ತಿದೆ.

ಈ ಅವಧಿಯಲ್ಲಿ ಅಗತ್ಯ ಔಷಧಗಳು ಮತ್ತು ನಿರ್ಣಾಯಕ ಸರಕುಗಳನ್ನು ಹೊರತುಪಡಿಸಿ ಇನ್ನುಳಿದ ಸರಕುಗಳ ಆಮದು ಮತ್ತು ರಫ್ತು ಸ್ಥಗಿತಗೊಳ್ಳಲಿದೆ.

error: Content is protected !!