ಆಸ್ತಿ ವಿಚಾರಕ್ಕೆ ತಂದೆಯನ್ನೇ ಕೊಂದ ಮಗ!!

ಗದಗ: ಆಸ್ತಿ ವಿಚಾರಕ್ಕೆ ತಂದೆ ಮಗನ‌ ನಡುವೆ ಕಲಹ ಏರ್ಪಟ್ಟಿದ್ದು, ತಂದೆಯನ್ನು ಕೊಂದು ಮಗ ಪೊಲೀಸ್ ಠಾಣೆಗೆ ಶರಣಾದ ಪ್ರಕರಣ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋವನಾಳ ಗ್ರಾಮದಲ್ಲಿ ನಡೆದಿದೆ.

ಶಂಕರಗೌಡ ದ್ಯಾವನಗೌಡ್ರ(56) ಮೃತ ದುರ್ದೈವಿ. ಪ್ರಭು ಶಂಕರಗೌಡ ದ್ಯಾವನಗೌಡ್ರ(24) ಆರೋಪಿ ಮಗ.

ಎರಡು ಎಕರೆ ಜಮೀನು ಬೇರೆಯವರಿಗೆ ಉಳುಮೆ ಮಾಡಲು ಹಾಕಿದ್ದ ಹಣದ ವಿಚಾರಕ್ಕೆ ತಂದೆ, ಮಗನ ನಡುವೆ ಜಗಳವಾಗಿದೆ. ಇಬ್ಬರು ಕುಡಿದು ಜಗಳವಾಡುತ್ತಿದ್ದರು. ಕುಡಿದ ಮತ್ತಿನಲ್ಲಿ ನಡೆದಿದ್ದ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ತಲೆ ಹಾಗೂ ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಘಟನಾ ಸ್ಥಳಕ್ಕೆ ಎಸ್ಪಿ ರೋಹನ್ ಜಗದೀಶ, ಡಿವೈಎಸ್ಪಿ ಮುರ್ತುಜಾ ಖಾದ್ರಿ, ಶಿರಹಟ್ಟಿ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಮಗ‌ ಕೊಲೆ ನಂತರ ತಾನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!