ಬ್ರೇಕ್ ವೈಫಲ್ಯದಿಂದಾಗಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನುಗ್ಗಿ ಲಾರಿ ಸಿಕ್ಕ ಸಿಕ್ಕ ವಾಹನಕ್ಕೆಲ್ಲ ಡಿಕ್ಕಿ!!

ಬೆಂಗಳೂರು: ಬ್ರೇಕ್​​ ವೈಫಲ್ಯದಿಂದಾಗಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನುಗ್ಗಿದ ಲಾರಿಯೊಂದು ಸಿಕ್ಕಿ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬಾಗಲೂರಿನಲ್ಲಿ ನಡೆದಿದೆ.

ಎದುರು ಬರುತ್ತಿದ್ದ ಕಾರುಗಳು, ದ್ವಿಚಕ್ರ ವಾಹನಗಳು ಸೇರಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಲಾರಿ ನಿಂತಿದ್ದು, ಘಟನೆಯ ದೃಶ್ಯ ಕಾರೊಂದರ ಡ್ಯಾಶ್​​ ಕ್ಯಾಮರಾದಲ್ಲಿ ಸೆರೆಯಾಗಿದೆ. ಲಾರಿ‌ ನುಗ್ಗಿದ ರಭಸಕ್ಕೆ ಎರಡು ಕಾರುಗಳು, 3 ಬೈಕ್​ಗಳು ಜಖಂ ಆಗಿದ್ದು, ವಾಹನಗಳಲ್ಲಿದ್ದ ಎಲ್ಲರೂ ಅದೃಷ್ಟವಶಾತ್​​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಏರ್​ಪೋರ್ಟ್​ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಲೋಡ್ ತುಂಬಿಕೊಂಡು ಬರುತ್ತಿದ್ದಾಗ ಏಕಾಏಕಿ ಲಾರಿಯ ಬ್ರೇಕ್ ಫೇಲ್​ ಆಗಿದೆ ಎನ್ನಲಾಗಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಬಗ್ಗೆ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!