ಸುರತ್ಕಲ್ : ಶ್ರೀ ಭಗವತೀ ದೇವಸ್ಥಾನ ಸಸಿಹಿತ್ಲು ಇಲ್ಲಿನ ಬ್ರಹ್ಮಕಲಶೋತ್ಸವದ ಪ್ರಯುಕ್ತ ಚಪ್ಪರ ಮೂಹೂರ್ತ ನಡೆಯಿತು.

ತಂತ್ರಿಗಳಾದ ಶ್ರೀಪತಿ ಭಟ್, ದೇವಳದ ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಯಾನೇ ಅಪ್ಪು ಪೂಜಾರಿ, ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಧಾನ ಕಾರ್ಯದರ್ಶಿ ರಮೇಶ್ ಬಂಗೇರ, ಚಪ್ಪರ ಸಮಿತಿಯ ಅಧ್ಯಕ್ಷ ಪ್ರೇಮನಾಥ ಸುವರ್ಣ, ಅಭಿವೃದ್ದಿ ಸಮಿತಿಯ ಅಧ್ಯಕ್ಷ ಪ್ರಭಾಕರ ಪೂಜಾರಿ, ವಿವಿಧ ಸಮಿತಿಗಳ ಸುಧಾಕರ ಸುವರ್ಣ, ಶೋಭೋಂದ್ರ ಸಸಿಹಿತ್ಲು, ಚಂದ್ರಶೇಖರ ನಾನಿಲ್, ಗೀತಾ ಕುಮಾರ್, ಲೀಲಾಧರ ಬಂಗೇರ, ಕಸ್ತೂರಿ ಪಂಜ, ಜಗನ್ನಾಥ ಕೋಟ್ಯಾನ್, ಉದಯಕುಮಾರ್, ವಿನೋದ್ ಕುಮಾರ್ ಬೊಳ್ಳೂರು, ಅಶೋಕ್ ಬಂಗೇರ, ಅರವಿಂದ್, ವಿ.ಕೆ.ಯಾದವ್, ಎಸ್.ಆರ್ ಪ್ರದೀಪ್, ಕಿರಣ್ ಗುರಿಕಾರ, ಸುಧಾನಂದ ಬೆಳ್ಚಡ, ರಾಜೇಂದ್ರ ಪ್ರಸಾದ್, ಮೋಹನ್ ಸುವರ್ಣ, ಅಶೀಶ್ ಬಂಗೇರ, ಉಮೇಶ್ ಅಮೀನ್, ಮನೋಜ್ ಕರ್ಕೇರ, ಸತೀಶ್ ಶೆಟ್ಟಿ ಎಕ್ಕಾರು ಉಪಸ್ಥಿತರಿದ್ದರು.