ಫೆ.21: KCCL ಕುಡ್ಲ ಉದ್ಘಾಟನೆ!

Kerala Vision Broadband ಸೇವೆ ಇನ್ನು ಮಂಗಳೂರಿನಲ್ಲೂ ಲಭ್ಯ

ಮಂಗಳೂರು: “ದೇಶದ ಅಂತರ್ಜಾಲ ವಿತರಣಾ ಕ್ಷೇತ್ರದಲ್ಲಿ ಆರನೇ ಅತೀದೊಡ್ಡ ಸೇವಾ ಪೂರೈಕೆದಾರರಲ್ಲೊಂದಾದ ಕೇರಳ ವಿಷನ್ ನ Broadband ಇದೀಗ ಕರ್ನಾಟಕದ ಪ್ರಮುಖ ವಾಣಿಜ್ಯ ಹಾಗೂ ಶೈಕ್ಷಣಿಕ ಕೇಂದ್ರವಾದ ಮಂಗಳೂರು ನಗರದಲ್ಲಿ ತನ್ನ ಸೇವೆಯನ್ನು ಆರಂಭಿಸುತ್ತಿದೆ. “KCCL KUDLA” ಎಂಬ ಹೆಸರಿನಲ್ಲಿ ಸೇವೆ ಆರಂಭಿಸಲಿರುವ Kerala Vision Broadband ಸೇವಾ ಪ್ರವೇಶದ ಔಪಚಾರಿಕ ಉದ್ಘಾಟನೆ ಫೆ.21ರಂದು ಮಂಗಳೂರಿನಲ್ಲಿ ಜರಗಲಿದೆ“ ಎಂದು ಶುಕೂರ್ ಕೋಳಿಕ್ಕಾರ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

”ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. KCCL KUDLA ಡಾಟಾ ಕೇಂದ್ರದ ಉದ್ಘಾಟನೆಯನ್ನು ಕೇರಳ ವಿಷನ್ ಆಪರೇಟರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಪ್ರವೀಣ್ ಮೋಹನ್ ನೆರವೇರಿಸಲಿದ್ದಾರೆ. ಮಂಗಳೂರಿಗೆ ವಿಶೇಷವಾಗಿ ರೂಪಿಸಲಾದ ಬ್ರಾಡ್ ಬ್ಯಾಂಡ್ ಯೋಜನೆಗಳ ದರ ಪಟ್ಟಿಯನ್ನು ಕೆಸಿಸಿಎಲ್‌ ಅಧ್ಯಕ್ಷರಾದ ಕೆ.ಗೋವಿಂದನ್ ಬಿಡುಗಡೆಗೊಳಿಸುವರು.

Kerala Vision Operators ಅಸೋಸಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಬಿ. ಸುರೇಶ್, ಕೋಶಾಧಿಕಾರಿ ಬಿನು ಶಿವದಾಸ್, ಕಾರ್ಯಕಾರಿ ಸಮಿತಿ ಸದಸ್ಯ ಕೆ. ವಿಜಯಕೃಷ್ಣನ್ ಹಾಗೂ KCCL ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಕುಮಾರ್ ಪಿ.ಪಿ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅತೀವೇಗ, ಸ್ಥಿರತೆ, ವಿಶ್ವಾಸಾರ್ಹತೆ ಮತ್ತು ಕಡಿಮೆ ದರಗಳೊಂದಿಗೆ ಮಂಗಳೂರಿನ ಗ್ರಾಹಕರಿಗೆ ಅತ್ಯುತ್ತಮ ಬ್ರಾಡ್ಯಾಂಡ್ ಸೇವೆಯನ್ನು ಒದಗಿಸಲು ಕೇರಳ ವಿಷನ್ ಸಜ್ಜಾಗಿದೆ. ಇನ್ನು ಕಾಯುವಿಕೆ ಇಲ್ಲದೆ, ಬಫರಿಂಗ್ ಇಲ್ಲದೆ ಮಿಂಚಿನ ವೇಗದಲ್ಲಿ ಡೌನ್ಲೋಡ್, ಅಡ್ಡಿಯಿಲ್ಲದ ಸ್ಟ್ರೀಮಿಂಗ್, 24/7 ವಿಶ್ವಾಸಾರ್ಹ ಸಂಪರ್ಕ. ಸಿಗ್ನಲ್ ಡ್ರಾಪ್‌ಗಳಿಲ್ಲದೆ, ವ್ಯತ್ಯಯಗಳಿಲ್ಲದೆ, ಹವಾಮಾನ ಬದಲಾವಣೆಯನ್ನೂ ತಡೆದು ನಿಲ್ಲುವ ಸ್ಥಿರ ಸೇವೆ ಒದಗಿಸಲಾಗುತ್ತದೆ.

‘ಅಧಿಕ ವೇಗ ಎನ್ನುವುದು ಅಧಿಕ ವೆಚ್ಚವಲ್ಲ’ ಎಂಬ ಧೈಯದೊಂದಿಗೆ, ಗ್ರಾಹಕರ ಸಾಮರ್ಥ್ಯಕ್ಕೆ ಹೊಂದಿಕೊಂಡು ಅತ್ಯುತ್ತಮ ಪ್ಯಾಕೇಟ್ಗಳನ್ನು ಪರಿಚಯಿಸಲಾಗುತ್ತಿದೆ. ಅತ್ಯಧಿಕ ವೇಗವನ್ನು ಅತಿ ಕಡಿಮೆ ದರದಲ್ಲಿ ನೀಡುವುದು ನಮ್ಮ ಉದ್ದೇಶ. 1,000 ಕೋಟಿ ರೂಪಾಯಿ ವಹಿವಾಟು ಹೊಂದಿರುವ ಯುನಿಕೋನ್ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ Kerala Vision, ಕಳೆದ 30 ವರ್ಷಗಳ ಕಾರ್ಯಾನುಭವ ಮತ್ತು ವಿಶ್ವಾಸಾರ್ಹತೆಯ ಪಾರಂಪರ್ಯವನ್ನು ಹೊಂದಿದೆ.

ಮಂಗಳೂರಿನ ಐಟಿ, ಶಿಕ್ಷಣ, ಸ್ಟಾರ್ಟ್ ಅಪ್ ಹಾಗೂ ವ್ಯಾಪಾರ ಕ್ಷೇತ್ರಗಳಿಗೆ ಬಲಿಷ್ಠ ಡಿಜಿಟಲ್ ಮೂಲ ಸೌಕರ್ಯ ಒದಗಿಸುವ ಮೂಲಕ ನಗರದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸುವುದೇ KCCL KUDLA ದ ಮುಖ್ಯ ಉದ್ದೇಶವಾಗಿದೆ. ಮಂಗಳೂರಿನ ಡಿಜಿಟಲ್ ಭವಿಷ್ಯಕ್ಕೆ ಹೊಸ ಅಧ್ಯಾಯವನ್ನು ತೆರೆದು, ಹೆಚ್ಚುವರಿ ವೇಗ, ಹೆಚ್ಚಿನ ವಿಶ್ವಾಸಾರ್ಹತೆ ಮತ್ತು ಆರ್ಥಿಕ ಸೌಲಭ್ಯಗಳೊಂದಿಗೆ Kerala Vision ಮಂಗಳೂರು ಜನತೆಯ ನಿತ್ಯ ಬದುಕಿನ ಅವಿಭಾಜ್ಯ ಅಂಗವಾಗಲಿದೆ ಎಂಬುದು ನಮ್ಮ ಆಶಯ.

ಕಾಸರಗೋಡು ಜಿಲ್ಲೆಯ Kerala Vision Broadband ನ ಅಧಿಕೃತ ವಿತರಕ ಕಂಪನಿಯಾದ Colleagues Cable Net Pvt. Ltd. ಇದೀಗ ಮಂಗಳೂರು ನಗರದಲ್ಲೂ Kerala Vision Broadband ಸೇವೆಗಳನ್ನು ನೇರವಾಗಿ ವಿತರಿಸುತ್ತಿದೆ.

ಪತ್ರಿಕಾಗೋಷ್ಟಿಯಲ್ಲಿ ಮೋಹನನ್ ಟಿ.ವಿ., ಸುದೇಶ್ ಭಂಡಾರಿ, ಚೇರ್ ಮೆನ್ ಕೆ.ಪ್ರದೀಪ್ ಕುಮಾರ್, ರೋಹಿದಾಸ್, ಸಂಘಟನೆ ಅಧ್ಯಕ್ಷ ಮನೋಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!