ಇರಾನ್‌ಗೆ 10 ದಿನಗಳ ಡೆಡ್‌ಲೈನ್! ಖಮೇನಿ ಕೋಟೆಗೆ ನುಗ್ಗುತ್ತಾ ಅಮೆರಿಕದ ಮಿಸೈಲ್?

ವಾಷಿಂಗ್ಟನ್: ಜಗತ್ತಿನ ಭೂಪಟದಲ್ಲಿ ಈಗ ದ್ವೇಷದ ಕೆಂಪು ಬಣ್ಣ ಅಚ್ಚೊತ್ತಿದೆ. ಅತ್ತ ಟೆಹ್ರಾನ್‌ನಲ್ಲಿ ಖಮೇನಿ ಮಸಲತ್ತು ನಡೆಸುತ್ತಿದ್ದರೆ, ಇತ್ತ ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಎಂಬ ಅವಸರ ಪುರುಷ ಕುಳಿತಿದ್ದಾರೆ. ಟ್ರಂಪ್ ಕೈಯಲ್ಲಿ ಈಗ ಪೆನ್ನು ಇಲ್ಲ, ಬದಲಿಗೆ ಮಿಸೈಲ್ ಉಡಾಯಿಸುವ ರಿಮೋಟ್ ಕಂಟ್ರೋಲ್ ಇದೆ. ಅಮೆರಿಕ ಮತ್ತು ಇರಾನ್ ನಡುವಿನ ಜಗಳ ಈಗ ಬೀದಿ ಜಗಳವಾಗಿ ಉಳಿದಿಲ್ಲ; ಅದು ಅಕ್ಷರಶಃ ಮಹಾಯುದ್ಧದ ಅಂಚಿಗೆ ಬಂದು ನಿಂತಿದೆ!

ಗುರುವಾರ ಗಾಜಾ ಶಾಂತಿ ಮಂಡಳಿಯ ಸಭೆಯಲ್ಲಿ ಟ್ರಂಪ್ ಗುಡುಗಿದ ರೀತಿ ನೋಡಿದರೆ, ಇರಾನ್ ಅಧ್ಯಕ್ಷರ ಎದೆಯಲ್ಲಿ ನಡುಕ ಶುರುವಾಗಿರಬೇಕು. ಟ್ರಂಪ್ ಕೊಟ್ಟಿರೋದು ಬರೀ ಹತ್ತು ದಿನಗಳ ಗಡುವು. “ನಾನು ಹೇಳಿದ ಹಾಗೆ ಕೇಳಿದ್ರೆ ಬದುಕಿಕೊಳ್ತೀರಿ, ಇಲ್ಲಾಂದ್ರೆ ಇರಾನ್ ಅನ್ನೋ ಹೆಸರೇ ಇತಿಹಾಸ ಸೇರುತ್ತೆ” ಎನ್ನುವುದು ಟ್ರಂಪ್ ನೀಡಿದ ನೇರ ಸಂದೇಶ. ಇದು ಕೇವಲ ಮಾತಲ್ಲ, ಅಮೆರಿಕದ ರಣಕಹಳೆ!

ಮೆಡಿಟರೇನಿಯನ್ ಸಮುದ್ರದಲ್ಲಿ ಈಗ ಅಲೆಗಳ ಸದ್ದಿಗಿಂತ ಅಮೆರಿಕದ ಯುದ್ಧ ನೌಕೆಗಳ ಸದ್ದೇ ಜೋರಾಗಿದೆ. ಯುಎಸ್‌ಎಸ್ ಜೆರಾಲ್ಡ್ ಆರ್. ಫೋರ್ಡ್ ಎಂಬ ಬೃಹತ್ ವಿಮಾನವಾಹಕ ನೌಕೆ ಇರಾನ್ ಕಡೆಗೆ ಮುಖ ಮಾಡಿದೆ. ಅದರ ಬೆನ್ನಲ್ಲೇ ನೂರಾರು ಫೈಟರ್ ಜೆಟ್‌ಗಳು, ಎಫ್-35 ಮತ್ತು ಎಫ್-22 ವಿಮಾನಗಳು ಆಕಾಶದಲ್ಲಿ ವಿಕೃತವಾಗಿ ಹಾರಾಡುತ್ತಿವೆ. ಗುಪ್ತಚರ ವರದಿಗಳ ಪ್ರಕಾರ, ಬರುವ ಶನಿವಾರದ ಹೊತ್ತಿಗೆ ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ಅಮೆರಿಕದ ಬಾಂಬ್‌ಗಳು ಮಳೆ ಸುರಿಸಿದರೂ ಆಶ್ಚರ್ಯವಿಲ್ಲ.

90 ಪರ್ಸೆಂಟ್ ಯುದ್ಧ ಫಿಕ್ಸ್!
ದಿ ಟೆಲಿಗ್ರಾಫ್ ವರದಿ ಮಾಡುತ್ತಿರುವ ಪ್ರಕಾರ, ಈ ಯುದ್ಧ ನಡೆಯುವ ಸಾಧ್ಯತೆ ಶೇಕಡಾ 90ರಷ್ಟಿದೆ. ಇರಾನ್ ತನ್ನ ಕ್ಷಿಪಣಿಗಳನ್ನು ಗುಜರಿ ಹಾಕಬೇಕು ಇಲ್ಲವೇ ಅಮೆರಿಕದ ದಾಳಿಗೆ ಬೆನ್ನು ತೋರಿಸಬೇಕು. ಇಸ್ರೇಲಿ ಗುಪ್ತಚರ ಇಲಾಖೆಯ ಹಳೇ ಹುಲಿಗಳೂ ಇದನ್ನೇ ಹೇಳ್ತಿದ್ದಾರೆ. ಜಗತ್ತು ಈಗ ಉಸಿರು ಬಿಗಿಹಿಡಿದು ಕುಳಿತಿದೆ. ಟ್ರಂಪ್ ಹೂಡಿರುವ ಈ ದಾಳಿಯ ರಹಸ್ಯ ಯೋಜನೆ ಇಡೀ ಪಶ್ಚಿಮ ಏಷ್ಯಾವನ್ನು ಸ್ಮಶಾನ ಮಾಡುತ್ತಾ? ಅಥವಾ ಇರಾನ್ ಶರಣಾಗುತ್ತಾ? ಹತ್ತು ದಿನಗಳ ಈ ಆಟದಲ್ಲಿ ಸಾವು ಯಾರ ಮನೆ ಬಾಗಿಲು ತಟ್ಟುತ್ತೆ ಅನ್ನೋದೇ ಈಗಿರೋ ಮಿಲಿಯನ್ ಡಾಲರ್ ಪ್ರಶ್ನೆ!

error: Content is protected !!