ದುಬೈ: 2028ರ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ 20 ತಂಡಗಳಲ್ಲಿ 12 ತಂಡಗಳ ಪಟ್ಟಿಯನ್ನು ಐಸಿಸಿ ಪ್ರಕಟಿಸಿದ್ದು, ಭಾರತ ಸೇರಿ 12 ತಂಡಗಳು ಅರ್ಹತೆ ಪಡೆದುಕೊಂಡಿವೆ.

ಮುಂದಿನ ವಿಶ್ವಕಪ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆಯಲಿದ್ದು, ಈ 2 ದೇಶಗಳು ನೇರವಾಗಿ ಟೂರ್ನಿಗೆ ಅರ್ಹತೆ ಪಡೆದುಕೊಂಡಿವೆ. ಈ ವಿಶ್ವಕಪ್‌ನಲ್ಲಿ ಸೂಪರ್ 8ಕ್ಕೆ ಪ್ರವೇಶಿಸಿದ ಭಾರತ, ಪಾಕಿಸ್ತಾನ, ಇಂಗ್ಲೆಂಡ್, ವೆಸ್ಟ್‌ಇಂಡೀಸ್, ಶ್ರೀಲಂಕಾ, ಜಿಂಬಾಬ್ವೆ, ದಕ್ಷಿಣ ಆಫ್ರಿಕಾ ತಂಡಗಳು ಅರ್ಹತೆ ಪಡೆದುಕೊಂಡಿವೆ. ಇನ್ನು ರ್‍ಯಾಂಕಿಂಗ್ ಆಧಾರದಲ್ಲಿ ಆಫ್ಘನ್, ಬಾಂಗ್ಲಾ ಮತ್ತು ಐರ್ಲೆಂಡ್ ಸ್ಥಾನ ಪಡೆದುಕೊಂಡಿವೆ.